ಕೊಹ್ಲಿ ಅಪರೂಪದ ಸಾಧನೆ

Update: 2018-12-11 04:47 GMT

ಅಡಿಲೇಡ್, ಡಿ.10: ಭಾರತ ಸೋಮವಾರ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡು ಸರಣಿಯಲ್ಲಿ ಶುಭಾರಂಭ ಮಾಡಿದೆ. ಇದೇ ವೇಳೆ, ನಾಯಕ ವಿರಾಟ್ ಕೊಹ್ಲಿ ಅಪರೂಪದ ಸಾಧನೆಗೆ ಸಾಕ್ಷಿಯಾದರು.

 ಕೊಹ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕದ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ ಜಯ ದಾಖಲಿಸಿದ ಏಶ್ಯದ ಮೊದಲ ನಾಯಕನೆಂಬ ಕೀರ್ತಿಗೆ ಭಾಜನರಾದರು. ಭಾರತ 2008ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಪರ್ತ್‌ನ ವಾಕಾ ಮೈದಾನದಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯವನ್ನು ಸೋಲಿಸಿತ್ತು. ಇದರರ್ಥ ಅನಿಲ್ ಕುಂಬ್ಳೆ ಬಳಿಕ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಭಾರತದ ಮೊದಲ ನಾಯಕ ಕೊಹ್ಲಿ. ಭಾರತ 2003ರಲ್ಲಿ ಸೌರವ್ ಗಂಗುಲಿ ನಾಯಕತ್ವದಲ್ಲಿ ಅಡಿಲೇಡ್ ಓವಲ್‌ನಲ್ಲಿ ಟೆಸ್ಟ್ ಪಂದ್ಯ ಜಯಿಸಿತ್ತು. ಕೊಹ್ಲಿ ನಾಯಕನಾಗಿ 43 ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದು, 20 ಬಾರಿ ಟಾಸ್ ಜಯಿಸಿದ್ದಾರೆ. ಈ ಪೈಕಿ 17 ಸಲ ಪಂದ್ಯ ಜಯಿಸಿದ್ದಾರೆ. 3 ಪಂದ್ಯ ಡ್ರಾಗೊಂಡಿವೆೆ. ಒಟ್ಟಾರೆ ಭಾರತ ಕೊಹ್ಲಿ ನಾಯಕತ್ವದಲ್ಲಿ 43 ಟೆಸ್ಟ್‌ಗಳಲ್ಲಿ 25 ಗೆಲುವು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News