ಹನೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ನಿಂದ ಮನೆಗೆ ಬೆಂಕಿ; ಅಪಾರ ನಷ್ಟ

Update: 2018-12-11 16:29 GMT

ಹನೂರು,ಡಿ.11: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಮನೆಯಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣ ಮತ್ತು ದಿನಬಳಕೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕೆಂಪಯ್ಯನಹಟ್ಟಿ ಗ್ರಾಮದ ಸುಂದ್ರಮ್ಮ ಎಂಬವರ ಮನೆ ಬೆಂಕಿಗೆ ಆಹುತಿಯಾಗಿದೆ. ಸುಂದ್ರಮ್ಮನ ಮಕ್ಕಳು ಕೂಲಿ ಕೆಲಸಕ್ಕಾಗಿ ಬೇರೆಡೆಗೆ ವಲಸೆ ಹೋಗಿದ್ದು ಸುಂದ್ರಮ್ಮ ಮಾತ್ರ 7 ಜನ ಮೊಮ್ಮಕ್ಕಳ ಜೊತೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ವಾಸವಿದ್ದರು. ಆದರೆ ಸೋಮವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಬೆಂಕಿಯು ಕ್ಷಣ ಮಾತ್ರದಲ್ಲಿ ಮನೆಯೆಲ್ಲಾ ಪಸರಿಸಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಸುಂದ್ರಮ್ಮ ಮತ್ತು ಆಕೆಯ ಮೊಮ್ಮಕ್ಕಳನ್ನು ರಕ್ಷಿಸಿದ್ದಾರೆ. 

ಈ ಸಂಬಂಧ ಪ್ರತಿಕ್ರಿಯಿಸಿದ ಸುಂದ್ರಮ್ಮ, ನನ್ನ ಮಗ ವಾಹನ ಖರೀದಿಸುವ ಉದ್ದೇಶದಿಂದ 1.30 ಲಕ್ಷ ಹಣವನ್ನು ತಂದು ಮನೆಯಲ್ಲಿರಿಸಿದ್ದ. ಘಟನೆಯಿಂದಾಗಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಸೇರಿದಂತೆ ದಿನ ಬಳಕೆಯ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದ್ದು, ಘಟನೆಯಿಂದಾಗಿ 2 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎಂದರು.

ಪೊಲೀಸ್, ಕಂದಾಯ ಇಲಾಖಾ ಅಧಿಕಾರಿಗಳ ಭೇಟಿ: ಸುದ್ದಿ ತಿಳಿದ ಗ್ರಾಮ ಲೆಕ್ಕಿಗ ನಾರಾಯಣಸ್ವಾಮಿ ಸ್ಥಳಕ್ಕೆ ಭೆಟಿ ನೀಡಿ ಸ್ಥಳ ಪರಿಶಿಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ರಾಮಾಪುರ ಸಿಪಿಐ ಮನೋಜ್‍ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News