ಐಪಿಎಲ್ ಆಟಗಾರರ ಹರಾಜು

Update: 2018-12-11 18:54 GMT

ಹೊಸದಿಲ್ಲಿ, ಡಿ.11: ಮುಂಬರುವ ಐಪಿಎಲ್ ಆಟಗಾರರ ಹರಾಜಿಗೆ 226 ಭಾರತೀಯರ ಸಹಿತ 346 ಕ್ರಿಕೆಟಿಗರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ 9 ಆಟಗಾರರ ಮೂಲ ಬೆಲೆ 2 ಕೋ.ರೂ. ಎಂದು ನಿಗದಿಪಡಿಸಲಾಗಿದೆ.

ಬ್ರೆಂಡನ್ ಮೆಕಲಮ್, ಕ್ರಿಸ್ ವೋಕ್ಸ್, ಲಸಿತ್ ಮಾಲಿಂಗ, ಕಾಲಿನ್ ಇನ್‌ಗ್ರಾಮ್, ಶಾನ್ ಮಾರ್ಷ್, ಕೋರಿ ಆ್ಯಂಡರ್ಸನ್, ಸ್ಯಾಮ್ ಕರನ್, ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ಡಿಆರ್ಕಿ ಶಾರ್ಟ್ ಗರಿಷ್ಠ ಮೂಲಬೆಲೆಯ ಪಟ್ಟಿಯಲ್ಲಿದ್ದಾರೆ.

ಭಾರತದ ಆಟಗಾರರ ಪೈಕಿ ಜೈದೇವ್ ಉನದ್ಕಟ್ ಗರಿಷ್ಠ ಮೂಲ ಬೆಲೆ 1.5 ಕೋ.ರೂ. ಆಗಿದೆ. 1 ಕೋ.ರೂ. ಮೂಲೆಬೆಲೆಯಿರುವ 19 ಆಟಗಾರರಲ್ಲಿ ನಾಲ್ವರು ಭಾರತೀಯರಾದ ಯುವರಾಜ್ ಸಿಂಗ್, ವೃದ್ಧಿಮಾನ್ ಸಹಾ, ಮುಹಮ್ಮದ್ ಶಮಿ ಹಾಗೂ ಅಕ್ಷರ್ ಪಟೇಲ್‌ರಿದ್ದಾರೆ.

ಬಾಂಗ್ಲಾದೇಶದ ಇಬ್ಬರು ಆಟಗಾರರಾದ ಮುಶ್ಫಿಕುರ್ರಹೀಂ ಹಾಗೂ ಮಹ್ಮೂದುಲ್ಲಾ ಅಂತಿಮಪಟ್ಟಿಯಲ್ಲಿದ್ದಾರೆ. ಮುಸ್ತಫಿಝುರ್ರಹ್ಮಾನ್‌ರನ್ನು ಮುಂಬರುವ ಐಪಿಎಲ್‌ನಲ್ಲಿ ಆಡದಂತೆ ಬಿಸಿಬಿ ತಾಕೀತುಮಾಡಿದೆ.

ಡಿ.10ರಂದು ಅಂತಿಮ ಪಟ್ಟಿಯನ್ನು ಸಲ್ಲಿಸುವಂತೆ ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ. ಡಿ.18ಕ್ಕೆ ಜೈಪುರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜುಪಟ್ಟಿಯಲ್ಲಿರುವ ಪ್ರತಿ ದೇಶದ ಆಟಗಾರರ ಸಂಖ್ಯೆ ಇಂತಿದೆ: ಭಾರತ-226, ದ.ಆಫ್ರಿಕ-26, ಆಸ್ಟ್ರೇಲಿಯ-23, ವೆಸ್ಟ್ ಇಂಡೀಸ್-18, ಇಂಗ್ಲೆಂಡ್-18, ನ್ಯೂಝಿಲೆಂಡ್-13, ಅಫ್ಘಾನಿಸ್ತಾನ-8, ಶ್ರೀಲಂಕಾ-7, ಬಾಂಗ್ಲಾದೇಶ-2, ಝಿಂಬಾಬ್ವೆ-2, ಅಮೆರಿಕ-1, ಐರ್ಲೆಂಡ್-1,ಹಾಲೆಂಡ್-1.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News