ಮಧ್ಯಪ್ರದೇಶ: ರಾಜಭವನದ ಕದತಟ್ಟಿದ ಕಾಂಗ್ರೆಸ್

Update: 2018-12-12 03:56 GMT

ಭೋಪಾಲ್, ಡಿ. 12: ರಾಜ್ಯದಲ್ಲಿ ಹದಿನೈದು ವರ್ಷಗಳ ಬಿಜೆಪಿ ಆಡಳಿತ ಕೊನೆಗೊಳಿಸಲು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸುವ ಸಲುವಾಗಿ ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿದೆ.

230 ಸದಸ್ಯಬಲದ ವಿಧಾನಸಭೆಯಲ್ಲಿ 115 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮುಖಂಡ ಕಮಲ್‌ನಾಥ್ ಅವರು ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಆದರೆ ಚುನಾವಣಾ ಆಯೋಗ, ಚುನಾವಣೆ ಫಲಿತಾಂಶದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ ಬಳಿಕವಷ್ಟೇ ಯಾವುದೇ ಪಕ್ಷದ ಮುಖಂಡರಿಗೆ ಭೇಟಿಗೆ ಅವಕಾಶ ನೀಡುವುದಾಗಿ ರಾಜಭವನ ಸ್ಪಷ್ಟಪಡಿಸಿದೆ.

"ಮಧ್ಯಪ್ರದೇಶದಲ್ಲಿ ನಾವು ಸ್ಪಷ್ಟ ಬಹುಮತ ಸಾಧಿಸಿದ್ದೇವೆ. ಇದು ಜನತೆಯ ಅದರಲ್ಲೂ ಮುಖ್ಯವಾಗಿ ರೈತರು ಮತ್ತು ಯುವಕರ ವಿಜಯ" ಎಂದು ಅವರು ಬಣ್ಣಿಸಿದ್ದಾರೆ. ಅಂತಿಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ 115, ಬಿಜೆಪಿ 108, ಬಿಎಸ್ಪಿ 2 ಹಾಗೂ ಇತರ ಪಕ್ಷ ಗಳು 5 ಸ್ಥಾನಗಳನ್ನು ಗೆದ್ದಿವೆ. ಕಳೆದ ಬಾರಿ 58 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಹೆಚ್ಚುವರಿಯಾಗಿ 57 ಸ್ಥಾನಗಳನ್ನು ಗೆದ್ದಿದೆ. ಅಂತೆಯೇ 165 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 57 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಎಸ್ಪಿ ಎರಡು ಕ್ಷೇತ್ರಗಳನ್ನು ಕಳೆದುಕೊಂಡು ಕೇವಲ ಎರಡು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಇತರ ಪಕ್ಷಗಳು ಹಿಂದಿನ ಬಾರಿಗಿಂತ ಎರಡು ಸ್ಥಾನಗಳನ್ನು ಹೆಚ್ಚಾಗಿ ಗೆದ್ದು ತಮ್ಮ ಬಲವನ್ನು 5ಕ್ಕೇರಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News