ಮಧ್ಯಪ್ರದೇಶ: ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಪಡೆಯಲು 2 ಸ್ಥಾನಗಳ ಕೊರತೆ

Update: 2018-12-12 05:26 GMT

ಹೊಸದಿಲ್ಲಿ, ಡಿ.12:  ಮಧ್ಯಪ್ರದೇಶದಲ್ಲಿ ಸರಳ ಬಹುಮತ ಪಡೆಯಲು ಕಾಂಗ್ರೆಸ್ ಗೆ 2 ಸ್ಥಾನಗಳ ಕೊರತೆ ಉಂಟಾಗಿದೆ.

ಮಧ್ಯಪ್ರದೇಶದಲ್ಲಿ ಬುಧವಾರ ಮುಂಜಾನೆ ಎಲ್ಲ ಕ್ಷೇತ್ರಗಳ  ಮತಎಣಿಕೆ ಪೂರ್ಣಗೊಂಡಿದ್ದು, ಚುನಾವಣಾ ಒಟ್ಟು 230 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ 114 ಸ್ಥಾನ ಲಭಿಸಿದ್ದು, ಬಿಜೆಪಿ 109 ಸ್ಥಾನಗಳನ್ನು ಗಳಿಸಿದೆ.  ಮಹಾ ಘಟ್ ಬಂಧನ್ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಎಸ್ ಪಿ 1 ಸ್ಥಾನ ಪಡೆದಿದ್ದರೆ, ಬಿಎಸ್ ಪಿ 2 ಸ್ಥಾನಗಳಿಸಿದೆ.. ಪಕ್ಷೇತರ 4 ಸ್ಥಾನ ಪಡೆದಿದೆ.

ಸರಳ ಬಹುಮತ ಪಡೆಯಲು 116 ಸ್ಥಾನಗಳು ಅಗತ್ಯ. ಸರಕಾರ ರಚನೆಯ ಅವಕಾಶಕ್ಕಾಗಿ ಕಾಂಗ್ರೆಸ್ ರಾಜ್ಯಪಾಲರಿಗೆ ಪತ್ರ ಬರೆದಿದೆ. ಮಂಗಳವಾರ ರಾತ್ರಿ ರಾಜ್ಯ ಕಾಂಗ್ರೆಸ್  ಅಧ್ಯಕ್ಷ ಕಮಲ್ ನಾಥ್ ಅವರು  ಸರಕಾರ ರಚನೆಗೆ ಸಂಬಂಧಿಸಿ ರಾಜ್ಯಪಾಲೆ ಆನಂದಿಬೆನ್ ಅವರ  ಭೇಟಿಗೆ ಅವಕಾಶ ಕೋರಿ ಇ-ಮೇಲ್  ಮತ್ತು ಫ್ಯಾಕ್ಸ್ ಮೂಲಕ ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News