ರಾಜಸ್ಥಾನ: ಕಾಂಗ್ರೆಸ್ ನ ಸಿಎಂ ಅಭ್ಯರ್ಥಿ ಆಯ್ಕೆ ರಾಹುಲ್ ಹೆಗಲಿಗೆ

Update: 2018-12-12 09:44 GMT

ಹೊಸದಿಲ್ಲಿ, ಡಿ.12: ರಾಜಸ್ಥಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ  ಮುಖ್ಯ ಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯ  ಆಯ್ಕೆಯ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಹಿಸಿಕೊಟ್ಟಿದೆ.

ಇಂದು ನಡೆದ ಸಭೆಯಲ್ಲಿ ಈ ಸರ್ವಾನುಮತದ ನಿರ್ಧಾರ ಕೈ ಗೊಳ್ಳಲಾಗಿದೆ.

ಬುಧವಾರ ಸಂಜೆಯೊಳಗಾಗಿ  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಸಚಿನ್ ಪೈಲೆಟ್ ತಿಳಿಸಿದ್ದಾರೆ.

ಸಚಿನ್ ಪೈಲೆಟ್ ಮತ್ತು ಅಶೋಕ್ ಗೆಹ್ಲೋಟ್ ಮುಖ್ಯ ಮಂತ್ರಿ ಹುದ್ದೆಯ ರೇಸ್ ನಲ್ಲಿದ್ದಾರೆ.

ರಾಜಸ್ಥಾನದಲ್ಲಿ ಚುನಾವಣೆ ನಡೆದಿರುವ ವಿಧಾನ ಸಭೆಯ 199 ಸ್ಥಾನಗಳಲ್ಲಿ ಕಾಂಗ್ರೆಸ್ 100 ಸ್ಥಾನಗಳನ್ನು ಜಯಿಸಿದೆ. ಬಹುಮತ ಪಡೆಯಲು 1  ಸ್ಥಾನದ ಕೊರತೆ  ಇದೆ.  ಬಿಜೆಪಿ 73, ಬಿಎಸ್ ಪಿ 6, ಇತರ  ಸ್ಥಾನಗಳು 20. ಈಗಾಗಲೇ ಬಿಎಸ್ಪಿ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹಾದಿ  ಸುಗಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News