ಈಗ ನಾನು ಸ್ವತಂತ್ರ: ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವರಾಜ್ ಸಿಂಗ್

Update: 2018-12-12 09:54 GMT

ಭೋಪಾಲ್, ಡಿ.12: ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದ ನಂತರ ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಸೋಲಿನ ಸಂಪೂರ್ಣ ಹೊಣೆ ಹೊರುವುದಾಗಿ ಅವರು ತಿಳಿಸಿದ್ದಾರೆ. “ನಾನು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಸೋಲಿನ ಹೊಣೆ ನನ್ನದು. ಈಗ ನಾನು ಸ್ವತಂತ್ರ, ಕಮಲ್ ನಾಥ್ ರಿಗೆ ಇದೇ ಸಂದರ್ಭ ಶುಭ ಕೋರುತ್ತಿದ್ದೇನೆ” ಎಂದು ಚೌಹಾಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News