ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಜಯಪ್ಪಗೌಡ ಆಯ್ಕೆ

Update: 2018-12-12 13:25 GMT
ಡಾ.ಡಿ.ಎಸ್ ಜಯಪ್ಪಗೌಡ

ಚಿಕ್ಕಮಗಳೂರು, ಡಿ.12: ಮೂಡಿಗೆರೆಯಲ್ಲಿ ಜ.18 ಮತ್ತು 19ರಂದು ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಂಶೋಧಕ, ಅನುವಾದಕ, ಸಾಹಿತಿ ಡಾ.ಡಿ.ಎಸ್.ಜಯಪ್ಪಗೌಡ ಆಯ್ಕೆಯಾಗಿದ್ದಾರೆ.

ಭಾಷಾಂತರಕಾರರೂ ಆಗಿರುವ ಜಯಪ್ಪಗೌಡ 25 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಗೌರವಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕಾರ್ಯಾಧ್ಯಕ್ಷರಾಗಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಎಂ.ಎಲ್.ಸಿ ಎಂ.ಕೆ.ಪ್ರಾಣೇಶ್, ತಾ.ಪಂ.ಅಧ್ಯಕ್ಷ ಕೆ.ಸಿ.ರತನ್ ಹಾಗೂ ಖಜಾಂಚಿಯಾಗಿ ರಂಜನ್ ಅಜಿತ್ ಕುಮಾರ್ ಆಯ್ಕೆಯಾಗಿದ್ದಾರೆ.

ಮಹಾಪೋಷಕರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಪ್ರಧಾನ ಸಂಚಾಲಕರಾಗಿ ಮಗ್ಗಲಮಕ್ಕಿ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸುಧೀರ್ ಕಡಿದಾಳ್, ಮೋಹನ್ ಕುಮಾರ್ ಶೆಟ್ಟಿ, ಆಹಾರ ಸಮಿತಿಯ ಅಧ್ಯಕ್ಷರಾಗಿ ಸಂಜಯ್, ಟಿ.ಹರೀಶ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಜೆ.ಎಸ್.ರಘು, ಭಾನುಮತಿ, ವಸತಿ ಮತ್ತು ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷರಾಗಿ ಎಂ.ಜಿ.ಶಿವಾನಂದ್, ಬಾಪು ದಿನೇಶ್, ಪರಿಕರ ಸಮಿತಿ ಅಧ್ಯಕ್ಷರಾಗಿ ಹಳೆಕೆರೆ ರಘು, ಎಂ.ಎಸ್.ನಾಗರಾಜ್, ಪುಸ್ತಕ ಪ್ರಕಟನೆ ಸಮಿತಿ ಅಧ್ಯಕ್ಷರಾಗಿ ನಂದೀಶ್ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News