ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿಗೆ ಅಗತ್ಯ ಕ್ರಮ: ಸಚಿವ ಯು.ಟಿ.ಖಾದರ್

Update: 2018-12-12 14:48 GMT

ಬೆಂಗಳೂರು, ಡಿ.12: ಸ್ಮಾರ್ಟ್ ಸಿಟಿ ಯೋಜನೆಯು ಇತರೆ ಯೋಜನೆಗಳಿಗಿಂತ ವಿಭಿನ್ನ ಹಾಗೂ ಹೊಸ ರೀತಿಯ ನಿಯಮಾವಳಿಗಳು ಹೊಂದಿರುವುದರಿಂದ ಯೋಜನೆ ಮಂದ ಗತಿಯಲ್ಲಿ ಸಾಗಿದೆ. ಅದಕ್ಕೆ ವೇಗ ಕಲ್ಪಿಸುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಸೂಪರ್ ವೈಸಿಂಗ್ ಕಮಿಟಿ ಸಭೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು ಹಾಗೂ ಬೆಂಗಳೂರನ್ನು ಗುರುತಿಸಲಾಗಿದೆ. ಈ ಯೋಜನೆಯು ವಿಭಿನ್ನವಾಗಿರುವುದರಿಂದ ಹೆಚ್ಚಿನ ಕಾಲವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.

ಕಾಮಗಾರಿಗೆ ಸ್ಥಳಿಯರ ನೆರವು ಅಗತ್ಯ: ಒಳಚರಂಡಿ ಕಾಮಗಾರಿ, ರಸ್ತೆ ಕಾಮಗಾರಿಗಳನ್ನು ಸುಸೂತ್ರವಾಗಿ ನಡೆಸಬೇಕಾದರೆ, ಸ್ಥಳಿಯ ಜನರು ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯವಿ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಶಾಸಕ ತಿಪ್ಪಾರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ಒಳಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸ್ಥಳೀಯರು ಅಡ್ಡಿ ಪಡಿಸುತ್ತಾರೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ಕಾಮಗಾರಿಗೆ ತಡೆಯಾಜ್ಞೆ ತರುತ್ತಾರೆ. ಇದೆಲ್ಲದರ ನಡುವೆ ಚಿತ್ರದುರ್ಗ ನಗರದ ಒಳಚರಂಡಿ ಕಾಮಗಾರಿ ಶೇ.90ರಷ್ಟು  ಪೂರ್ಣಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News