ಫ್ರಾನ್ಸ್ ತಂತ್ರಜ್ಞಾನ ಬಳಸಿ ಕಸದಿಂದ ವಿದ್ಯುತ್ ತಯಾರಿಕೆಗೆ ಚಿಂತನೆ: ಡಿಸಿಎಂ ಪರಮೇಶ್ವರ್

Update: 2018-12-12 15:12 GMT

ಬೆಳಗಾವಿ, ಡಿ.12: ಫ್ರಾನ್ಸ್ ತಂತ್ರಜ್ಞಾನ ಬಳಸಿ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿದ್ಯುತ್ತಾಗಿ ಪರಿವರ್ತಿಸುವ ಮೂಲಕ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ವಿಸ್ತೀರ್ಣ 250 ಕಿಲೋ ಮಿಟರ್ ಇತ್ತು, ಈಗ 800 ಚ.ಕಿ.ಮೀ. ಆಗಿದೆ. ದಿನವೊಂದಕ್ಕೆ ಹೊಟೇಲ್, ಕಲ್ಯಾಣಮಂಟಪ, ಅಪಾರ್ಟ್‍ಮೆಂಟ್‍ಗಳಿಂದ ಒಂದೂವರೆ ಸಾವಿರ ಮೆಟ್ರಿಕ್ ಟನ್ ಹಾಗೂ ಜನವಸತಿ ಪ್ರದೇಶದಿಂದ 4 ಸಾವಿರ ಮೆಟ್ರಿಕ್ ಟನ್ ಸೇರಿ ದಿನಕ್ಕೆ 6 ಸಾವಿರ ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತಿದೆ ಎಂದರು.

ಬೆಂಗಳೂರು ಗಾರ್ಬೇಜ್ ಸಿಟಿ ಎಂಬ ಅಪಕೀರ್ತಿಗೆ ಒಳಗಾಗಿತ್ತು. ನಮ್ಮ ಸರಕಾರ ಹಂತ ಹಂತವಾಗಿ ಸಮಸ್ಯೆ ಬಗೆಹರಿಸುತ್ತಿದೆ. ಕಸವನ್ನು ಒಂದು ಕಡೆ ದಾಸ್ತಾನು ಮಾಡುವ ಬದಲಾಗಿ ಅದನ್ನು ವಿದ್ಯುತ್ತಾಗಿ ಪರಿವರ್ತಿಸಲು ಒತ್ತು ನೀಡಲಾಗುವುದು. ಇತ್ತೀಚೆಗೆ ತಾನು ಫ್ರಾನ್ಸ್ ಪ್ರವಾಸ ಕೈಗೊಂಡಾಗ ಈ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಎಲ್ಲರ ಸಹಕಾರ ಸಿಕ್ಕರೆ ಅದನ್ನು ಜಾರಿಗೆ ತಂದು ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News