‘ಎಡಿಟರ್ಸ್ ಗಿಲ್ಡ್’ನಿಂದ ಎಂ.ಜೆ. ಅಕ್ಬರ್, ತರುಣ್ ತೇಜ್ ಪಾಲ್ ಅಮಾನತು

Update: 2018-12-12 15:30 GMT

ಹೊಸದಿಲ್ಲಿ, ಡಿ.12: ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಹಾಗು ತರುಣ್ ತೇಜ್ ಪಾಲ್ ರನ್ನು ‘ದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ದಿಂದ ಅಮಾನತುಗೊಳಿಸಲಾಗಿದೆ.

“ಹಲವು ಪತ್ರಕರ್ತೆಯರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಎಂ.ಜೆ. ಅಕ್ಬರ್, ತರುಣ್ ತೇಜ್ ಪಾಲ್ ಹಾಗು ಗೌತಮ್ ಅಧಿಕಾರಿಯವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಗಿಲ್ಡ್ ಕಾರ್ಯಕಾರಿ ಸಮಿತಿಯ ಅಭಿಪ್ರಾಯ ಕೇಳಿದೆ. ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ಎಂ.ಜೆ. ಅಕ್ಬರ್ ರನ್ನು ಅಮಾನತುಗೊಳಿಸಬೇಕು ಎಂದು ಹೇಳಿದ್ದಾರೆ. ಇದೇ ಸಮಯ ತೇಜ್ ಪಾಲ್ ರನ್ನೂ ಅಮಾನತುಗೊಳಿಸಲಾಗುವುದು” ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News