ಸುಶೀಲ್, ಸಾಕ್ಷಿಗೆ ‘ಎ’ ಗ್ರೇಡ್ ಗುತ್ತಿಗೆ

Update: 2018-12-12 18:09 GMT

ಮುಂಬೈ, ಡಿ.12: ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಹಾಗೂ ಸುಶೀಲ್ ಕುಮಾರ್ ಅವರ ಗುತ್ತಿಗೆ ಗ್ರೇಡ್‌ನ್ನು ‘ಬಿ’ಯಿಂದ ‘ಎ’ಗೆ ಏರಿಸಿ ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಲುಎಫ್‌ಐ) ಬುಧವಾರ ಆದೇಶ ನೀಡಿದೆ.

ಈ ಹಿಂದೆ ಈ ಇಬ್ಬರೂ ಕುಸ್ತಿಪಟುಗಳಿಗೆ ‘ಬಿ’ ಗ್ರೇಡ್‌ನ್ನು ನೀಡಲಾಗಿತ್ತು. ಇದೊಂದು ತಪ್ಪು ನಿರ್ಧಾರವಾಗಿತ್ತು ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಇಲ್ಲಿ ಬುಧವಾರ ನಡೆದ ಟಾಟಾ ಮೋಟಾರ್ಸ್‌ನ ಎಲೈಟ್ ಕುಸ್ತಿಪಟುಗಳ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘‘ ನಾವು ಆಟಗಾರರಿಗೆ ಎ,ಬಿ,ಸಿ,ಡಿ,ಇ ಮತ್ತು ಎಫ್ ಗ್ರೇಡಿಂಗ್ ಪದ್ಧತಿ ಜಾರಿಗೊಳಿಸಿದ್ದೇವೆ. ಗೊಂಡಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದು, ಸಾಕ್ಷಿ ಮಲಿಕ್ ಹಾಗೂ ಸುಶೀಲ್ ಕುಮಾರ್ ಉತ್ತಮ ಸಾಧನೆ ಮಾಡಿರುವುದು ಮನವರಿಕೆಯಾಗಿದೆ. ಹೀಗಾಗಿ ಅವರ ಶ್ರೇಣಿಯನ್ನು ಏರಿಕೆ ಮಾಡಿದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News