ಕೊಳ್ಳೇಗಾಲ: ಜಮೀನಿನಲ್ಲಿ ವಿದ್ಯುತ್ ಅವಘಡ; ಅಪಾರ ನಷ್ಟ

Update: 2018-12-13 18:51 GMT

ಕೊಳ್ಳೇಗಾಲ,ಡಿ.13: ವಿದ್ಯುತ್ ಅವಘಡದಿಂದ ಜಮೀನಿನ ನೀರೆತ್ತುವ ವಿದ್ಯುತ್ ಮೋಟಾರ್, ಪಂಪ್‍ಹೌಸ್‍ನ ಸಲಕರಣೆಗಳು ಸುಟ್ಟು ಹೋಗಿರುವ ಘಟನೆ ತಾಲೂಕಿನ ಹರಳೆ ಗ್ರಾಮದ ಸಮೀಪ ಜರುಗಿದೆ.

ಪಟ್ಟಣದ ವ್ಯಾಪ್ತಿಯ ಹರಳೆ ಗ್ರಾಮ, ಸರ್ವೆ ನಂ.80 ರಲ್ಲಿರುವ 63 ಸೆಂಟ್ಸ್ ಜಮೀನ್‍ನಲ್ಲಿರುವ ಪಂಪ್ ಹೌಸ್, ನೀರೆತ್ತುವ ಮೋಟಾರು ಹಾಗೂ ಇನ್ನಿತರ ಸಲಕರಣೆಗಳು ಸುಟ್ಟು ಭಸ್ಮವಾಗಿರುವುದಾಗಿ ಜಮೀನಿನ ಮಾಲಕ ಮಾಜಿ ಸೈನಿಕ ಚಿಕ್ಕಹುಚ್ಚಯ್ಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಹರಳೆ ಗ್ರಾಮದ ರಸ್ತೆಯಲ್ಲಿರುವ ವಿದ್ಯುತ್ ಸ್ಥಾವರದಿಂದ ಅತೀ ಹೆಚ್ಚಿನ ವಿದ್ಯುತ್ ಹೊರ ಬಂದು ವಿದ್ಯುತ್ ಅವಘಡದಿಂದಾಗಿ ಪಕ್ಕದ ಜಮೀನಿನಲ್ಲಿದ್ದ ಬಾವಿಯಿಂದ ನೀರೆತ್ತುವ ಮೋಟಾರ್, ಪಂಪ್‍ಹೌಸ್‍ನಲ್ಲಿರುವ ಪ್ಯಾನಲ್ ಬೋರ್ಡ್, ಸ್ಟಾಟರ್ರ್ಸ್ ಮತ್ತು ಇತರೆ ವಿದ್ಯುತ್ ಉಪಕರಣಗಳು, ನೀರಾವರಿಗಾಗಿ ಬಳಸಲು ಇಟ್ಟಿದ್ದ ಪಿ.ವಿ.ಸಿ ಪೈಪ್‍ಗಳು, 4 ಗೇಟ್ ವಾಲ್‍ಗಳ ಸುಟ್ಟು ಹೋಗಿದೆ. ಸುಮಾರು 80 ಸಾವಿರಕ್ಕೂ ಹೆಚ್ಚು ನಷ್ಟವಾಗಿರುವುದಾಗಿ ಚಿಕ್ಕಹುಚ್ಚಯ್ಯರವರು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News