ರಾಹುಲ್ ಗಾಂಧಿ ದೇಶದ ಜನರ, ಸೇನೆಯ ಕ್ಷಮೆ ಕೇಳಬೇಕು: ಅಮಿತ್ ಶಾ

Update: 2018-12-14 08:06 GMT

ಹೊಸದಿಲ್ಲಿ, ಡಿ.14: ಸುಪ್ರೀಂಕೋರ್ಟ್ ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ಯಾವುದೇ ತನಿಖೆಯ ಅಗತ್ಯವಿಲ್ಲ. ಎಲ್ಲ ಪ್ರಕ್ರಿಯೆ ಸರಿಯಾಗಿದೆ ಎಂದು ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶದ ಮೂಲಕ ಕಾಂಗ್ರೆಸ್ ಪಕ್ಷದ ಸುಳ್ಳು ಬಟಾ ಬಯಲಾಗಿದೆ. ಗೆಲುವು ಯಾವಾಗಲೂ ಸತ್ಯದ ಕಡೆಗಿರುತ್ತ. ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುತ್ತಿರುವ ರಾಹುಲ್ ತಕ್ಷಣವೇ ದೇಶದ ಜನರ ಹಾಗೂ ಸೇನೆಯ ಕ್ಷಮೆ ಕೋರಬೇಕು’’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗ್ರಹಿಸಿದ್ದಾರೆ.

 ರಾಜಧಾನಿಯಲ್ಲಿ ಗುರುವಾರ ತುರ್ತು ಸುದ್ಧಿಗೋಷ್ಠಿ ನಡೆಸಿದ ಶಾ, ‘‘ರಫೇಲ್ ಒಪ್ಪಂದದಲ್ಲಿ ಮಧ್ಯವರ್ತಿಗಳಿಲ್ಲ. ಒಪ್ಪಂದ ಪ್ರಕ್ರಿಯೆ ಎರಡು ದೇಶಗಳ ಮಧ್ಯೆ ನಡೆದಿದೆ. ಅವ್ಯವಹಾರದ ಮಾಹಿತಿ ಅವರಿಗೆ ಸಿಕ್ಕಿದ್ದರೆ, ಅದು ಹೇಗೆ ಸಿಕ್ಕಿರುವುದು ಎಂದು ಬಹಿರಂಗಪಡಿಸಲಿ’’ ಎಂದು ಶಾ ಆಗ್ರಹಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News