2018ನೆ ಸಾಲಿನ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

Update: 2018-12-14 12:30 GMT

ಬೆಂಗಳೂರು, ಡಿ.14: ರಾಜ್ಯ ನಾಟಕ ಅಕಾಡೆಮಿಯು 2018ನೆ ಸಾಲಿನ ಜೀವಮಾನದ ಗೌರವ ಪ್ರಶಸ್ತಿ, ವಾರ್ಷಿಕ ರಂಗಪ್ರಶಸ್ತಿ ಹಾಗೂ ವಿವಿಧ ದತ್ತಿ ಪುರಸ್ಕಾರ ಪ್ರಶಸ್ತಿಗಳನ್ನು ಪ್ರಕಟ ಮಾಡಿದೆ.

ಜೀವಮಾನದ ಗೌರವ ಪ್ರಶಸ್ತಿ: ಮೈಸೂರು ಜಿಲ್ಲೆಯ ಹಿರಿಯ ನಿರ್ದೇಶಕ, ಸಂಘಟಕ ಪಿ.ಗಂಗಾಧರಸ್ವಾಮಿಯನ್ನು 2018ನೆ ಸಾಲಿನ ಜೀವಮಾನದ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಾರ್ಷಿಕ ರಂಗ ಪ್ರಶಸ್ತಿ: ಬೆಂಗಳೂರು ಜಿಲ್ಲೆಯ ಉಗಮ ಶ್ರೀನಿವಾಸ (ಪ್ರಕಾರ: ಹವ್ಯಾಸಿ ರಂಗಭೂಮಿ, ರಂಗ ಸಂಘಟಕ, ನಟ, ರಂಗ ವಿಮರ್ಶೆ), ತುಮಕೂರು ಜಿಲ್ಲೆಯ ಡಿ.ಎಲ್.ನಂಜುಂಡಸ್ವಾಮಿ(ಗ್ರಾಮೀಣ ರಂಗಭೂಮಿ, ರಂಗ ಸಂಗೀತ), ಹಾಸನ ಜಿಲ್ಲೆಯ ಜಕಾವುಲ್ಲಾ(ನಟ, ವೃತ್ತಿರಂಗಭೂಮಿ).

ಕಲಬುರ್ಗಿ ಜಿಲ್ಲೆಯ ಪ್ರಭಾಕರ ಜೋಷಿ(ನಟ, ನಿರ್ದೇಶಕ, ಸಂಘಟಕ, ಸಾಹಿತ್ಯ, ಹವ್ಯಾಸಿ ರಂಗಭೂಮಿ), ರಾಯಚೂರು ಜಿಲ್ಲೆಯ ವಿಜಯಾನಂದ ಕರಡಿಗುಡ್ಡ (ವೃತ್ತಿರಂಗಭೂಮಿ ನಟ), ಬಾಗಲಕೋಟೆ ಜಿಲ್ಲೆಯ ಖಾಜೇಸಾಬ ಜಂಗಿ(ವೃತ್ತಿರಂಗಭೂಮಿ ನಟ), ವಿಜಯಪುರ ಜಿಲ್ಲೆಯ ಬಸಪ್ಪ ಮದರಿ(ವೃತ್ತಿರಂಗಭೂಮಿ ನಟ).

ಬೆಂಗಳೂರು ಜಿಲ್ಲೆಯ ಎಂ.ರವಿ(ನೇಪಥ್ಯ, ನಟ, ನಿರ್ದೇಶಕ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಗದೀಶ್ ಕೆಂಗನಾಳ( ನಟ, ಹವ್ಯಾಸಿ ರಂಗಭೂಮಿ, ಸಂಘಟಕ), ಚಾಮರಾಜನಗರ ಜಿಲ್ಲೆಯ ಕಿರಗಸೂರು ರಾಜಪ್ಪ(ರಂಗ ಸಂಗೀತ, ನಿರ್ದೇಶಕ, ಗ್ರಾಮೀಣ ರಂಗಭೂಮಿ), ಉಡುಪಿ ಜಿಲ್ಲೆಯ ಟಿ.ಪ್ರಭಾಕರ ಕಲ್ಯಾಣಿ(ನಟ, ಸಂಘಟಕ, ಹವ್ಯಾಸಿ ರಂಗಭೂಮಿ).

ಬಳ್ಳಾರಿ ಜಿಲ್ಲೆಯ ಎಸ್.ಆಂಜಿನಮ್ಮ(ನಟಿ, ಪೌರಾಣಿಕ), ಗದಗ ಜಿಲ್ಲೆಯ ಸಾವಿತ್ರಿ ನಾರಾಯಣಪ್ಪ ಗೌಡರ(ನಟಿ, ವೃತ್ತಿರಂಗಭೂಮಿ), ಬೆಳಗಾವಿ ಜಿಲ್ಲೆಯ ಮಕಮ್ಮಲ್ ಹುಣಸಿಕಟ್ಟಿ(ನಟ, ನಿರ್ದೇಶಕ, ಸಂಘಟಕ), ಚಿತ್ರದುರ್ಗ ಜಿಲ್ಲೆಯ ಹನುಮಂತಪ್ಪ ಬಾಗಲಕೋಟಿ(ವೃತ್ತಿರಂಗಭೂಮಿ ನಟ).

ಕೋಲಾರ ಜಿಲ್ಲೆಯ ಡಾ.ಕೆ.ವೈ.ನಾರಾಯಣಸ್ವಾಮಿ(ನಾಟಕಕಾರ), ದಕ್ಷಿಣ ಕನ್ನಡ ಜಿಲ್ಲೆಯ ಉಷಾ ಭಂಡಾರಿ(ನಟಿ, ನಿರ್ದೇಶಕಿ, ಹವ್ಯಾಸಿ), ಶಿವಮೊಗ್ಗ ಜಿಲ್ಲೆಯ ಡಿ.ಎಂ.ರಾಜಕುಮಾರ್(ನಟ, ಹವ್ಯಾಸಿ ರಂಗಭೂಮಿ), ದೊಡ್ಡಬಳ್ಳಾಪುರ ತಾಲೂಕಿನ ಆಂಜಿನಪ್ಪ(ನಟ, ಹವ್ಯಾಸಿ ರಂಗಭೂಮಿ), ತುಮಕೂರು ಜಿಲ್ಲೆಯ ಹುಲಿವಾನ ಗಂಗಾಧರಯ್ಯ(ನಟ, ಸಂಘಟಕ).

ಮುಂಬಯಿಯ ಮೋಹನ್ ಮಾರ್ನಾಡು(ನಟ, ಸಂಘಟಕ), ಮಂಡ್ಯ ಜಿಲ್ಲೆಯ ಕೆಂಚೇಗೌಡ ಟಿ.(ನಟ, ಗ್ರಾಮೀಣ, ಪೌರಾಣಿಕ ರಂಗಭೂಮಿ), ಮೈಸೂರು ಜಿಲ್ಲೆಯ ಮೈಮ್ ರಮೇಶ್(ನಟ, ರಂಗಸಂಘಟಕ, ನಿರ್ದೇಶಕ), ದಾವಣಗೆರೆ ಜಿಲ್ಲೆಯ ಚಿಂದೋಡಿ ಚಂದ್ರಧರ(ವೃತ್ತಿರಂಗಭೂಮಿ ನಟ, ಕಂಪೆನಿ ಮಾಲಕರು), ತುಮಕೂರು ಜಿಲ್ಲೆಯ ಈಶ್ವರದಲಾ(ನಟ, ಹವ್ಯಾಸಿ ರಂಗಭೂಮಿ).

ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಪ್ರಶಸ್ತಿ: ಅಕಾಡೆಮಿಯ ಕಲ್ಚರ್ಡ್‌ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಪ್ರಶಸ್ತಿಗೆ ಹಾಸನ ಜಿಲ್ಲೆಯ ಹವ್ಯಾಸಿ ರಂಗಭೂಮಿಯ ನಟ, ನಿರ್ದೇಶಕ ನಿಕೋಲಸ್(68)ರನ್ನು ಆಯ್ಕೆ ಮಾಡಲಾಗಿದೆ.

ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ ಪ್ರಶಸ್ತಿ: ಅಕಾಡೆಮಿಯ ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ವೃತ್ತಿರಂಗಭೂಮಿ ನಟ ಮೃತ್ಯುಂಜಯಸ್ವಾಮಿ ಹಿರೇಮಠ(72)ರನ್ನು ಆಯ್ಕೆ ಮಾಡಲಾಗಿದೆ.

ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ: ಅಕಾಡೆಮಿಯ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿಗೆ ಧಾರವಾಡ ಜಿಲ್ಲೆಯ ವೃತ್ತಿರಂಗಭೂಮಿಯ ನಿರ್ದೇಶಕ, ನಾಟಕಕಾರ, ಸಂಘಟಕ ಎಂಎ.ಸ್.ಮಾಳವಾಡ (62)ರನ್ನು ಆಯ್ಕೆ ಮಾಡಲಾಗಿದೆ.

ಕೆ.ರಾಮಚಂದ್ರಯ್ಯ ದತ್ತಿ ನಿಧಿ ಪುರಸ್ಕಾರ: ಅಕಾಡೆಮಿಯ ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ ಪ್ರಶಸ್ತಿಗೆ ರಾಮನಗರ ಜಿಲ್ಲೆಯ ಹವ್ಯಾಸಿ ರಂಗಭೂಮಿ ನಟ ನ.ಲಿ.ನಾಗರಾಜ್(75)ರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News