ಶಿವಮೊಗ್ಗ: ಲಾರಿ ಢಿಕ್ಕಿ; ದ್ವಿಚಕ್ರ ವಾಹನ ಹಿಂಬದಿ ಸವಾರ ಸಾವು

Update: 2018-12-14 19:16 GMT

ಶಿವಮೊಗ್ಗ, ಡಿ. 14: ವೇಗವಾಗಿ ಆಗಮಿಸಿದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಚಾಲಕನಿಗೆ ಸಣ್ಣಪುಟ್ಟ ಗಾಯವಾದ ಘಟನೆ ನಗರದ ಬಿ.ಹೆಚ್.ರಸ್ತೆಯ ವಿನಾಯಕ ಚಿತ್ರಮಂದಿರದ ಬಳಿ ಗುರುವಾರ ರಾತ್ರಿ ನಡೆದಿದೆ. 

ಎನ್.ಟಿ.ರಸ್ತೆ ಜೆ.ಸಿ.ನಗರದ ಟೆಂಪೋ ಸ್ಟ್ಯಾಂಡ್ ನಿವಾಸಿ ಮನೋಜ್‍ಕುಮಾರ್ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಸ್ತೆ ಮೇಲೆ ಬಿದ್ದ ಮನೋಜ್‍ ಕುಮಾರ್ ಮೇಲೆಯೇ ಲಾರಿಯ ಚಕ್ರಗಳು ಹರಿದು ಹೋಗಿದೆ. 

ಲಾರಿ ಚಾಲಕನ ಅಜಾಗರೂಕ, ನಿರ್ಲಕ್ಷ್ಯದ ಚಾಲನೆಯೇ ಅವಘಡಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ತಿಮ್ಮಪ್ಪ ಮತ್ತವರ ಸಿಬ್ಬಂದಿ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News