ಬಾಂಬ್ ಬೆದರಿಕೆ ಕರೆ: ಮುಂಬೈ-ಲಕ್ನೋ ವಿಮಾನ ತುರ್ತು ಭೂ ಸ್ಪರ್ಶ

Update: 2018-12-15 06:10 GMT

 ಮುಂಬೈ, ಡಿ.15: ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈನಿಂದ ದಿಲ್ಲಿ ಮಾರ್ಗವಾಗಿ ಲಕ್ನೋಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

ಬಾಂಬ್ ಬೆದರಿಕೆ ಕರೆ ಪರಿಶೀಲನಾ ಸಮಿತಿ ‘ಬೆದರಿಕೆ ಕರೆ’ ನಿಜವೆಂದು ಖಚಿತಪಡಿಸಿದ ಬಳಿಕ ವಿಮಾನವನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸಂಪೂರ್ಣ ಪರಿಶೀಲನೆ ನಡೆಸಲಾಗಿದೆ. ವಿಮಾನ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭದ್ರತಾ ಏಜೆನ್ಸಿಗಳು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ಬೆಳಗ್ಗೆ 6:05ಕ್ಕೆ ನಿರ್ಗಮಿಸಬೇಕಾಗಿತ್ತು. ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂಬ ಬಗ್ಗೆ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News