ತುಮಕೂರು: 2700 ಕೋಟಿ ರೂ. ವೆಚ್ಚದ 96 ಕಿ.ಮಿ.ರಸ್ತೆ ಕಾಮಗಾರಿಗೆ ಚಾಲನೆ

Update: 2018-12-16 18:41 GMT

ತುಮಕೂರು, ಡಿ.16: ತುಮಕೂರು ಮಲ್ಲಸಂದ್ರದಿಂದ ಗುಬ್ಬಿ ತಿಪಟೂರು ಮಾರ್ಗದಿಂದ ಜಿಲ್ಲೆಯ ಗಡಿ ಭಾಗದ 2700 ಕೋಟಿ ರೂ ವೆಚ್ಚದಲ್ಲಿ 96 ಕಿ.ಮಿ.ಚತುಷ್ಟದ ರಸ್ತೆ ಯೋಜನೆಗೆ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಚಾಲನೆ ನೀಡಿದರು. 

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ಬಳಿ ಇರುವ ಮಾತಾ ಕನ್ವೆಷನ್‍ಹಾಲ್ ಬಳಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಡಾ.ಜಿ.ಪರಮೇಶ್ವರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ತುಮಕೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಹೆದ್ದಾರಿ ರಸ್ತೆ ಅಗಲಿಕರಣ ಮಾಡುವ ನಾಲ್ಕು ಚತುಷ್ಪತದ ರಸ್ತೆಯನ್ನು 4700 ಕೋಟಿ ಹಣದಲ್ಲಿ 206 ಕೀ ಲೋ ಮೀಟರ್ ರಸ್ತೆ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರದಿಂದ ಅನುದಾನ ಪಡೆಯಲು ಸಂಸದ ಮುದ್ದಹನುಮೇಗೌಡ ಅವರು ಸಫಲರಾಗಿದ್ದಾರೆ ಎಂದರು.

ಇಡೀ ರಾಷ್ಟ್ರದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದ್ದು, ಈ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಿ.ಪಿ.ಪಿ. ಮಾಡಲ್ ನಲ್ಲಿ 10 ಸಾವಿರ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು. ಅಲ್ಲದೇ ಎಲ್ಲ ಕ್ಯಾಪಿಟಲ್ ರಸ್ತೆಗಳ ಲಿಂಕ್ ಮಾಡಿದ್ದರಿಂದಲೇ ರಾಜ್ಯಗಳು ಅಭಿವೃದ್ಧಿಯಾಗಲು ಸಾಧ್ಯ, ರಸ್ತೆಗಳು ಸರಿಯಾದ ಪರಿಣಾಮ ರಾಜ್ಯಗಳು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ತುಮಕೂರು ಜಿಲ್ಲೆಯಲ್ಲಿ ರಸ್ತೆಗಳು ಚೆನ್ನಾಗಿರಬೇಕು. ಮಲ್ಲಸಂದ್ರದಿಂದ ಕರಡಿ ಗ್ರಾಮ, ಕರಡಿಯಿಂದ ಬಾಣಾವರದವರೆಗೆ ರಸ್ತೆ ಅಭಿವೃದ್ಧಿಪಡಿಸಲು ಮೊದಲ ಹಂತದಲ್ಲಿ 2034  ಕೋಟಿಯನ್ನು ವ್ಯಯಿಸಲಾಗುತ್ತಿದ್ದು, ರೈತರಿಗೆ ಪರಿಹಾರ ನೀಡಲು 1200 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ರಸ್ತೆ ಅಭಿವೃದ್ಧಿಗಾಗಿ ಭೂಮಿಯನ್ನು ಕಳೆದುಕೊಂಡ ರೈತರು ಹೆದರುವ ಅಗತ್ಯವಿಲ್ಲ. ರೈತರಿಗೆ ಅಗತ್ಯ ಭೂ ಪರಿಹಾರವನ್ನು ನೀಡಲಾಗುವುದು ಎಂದ ಅವರು, ರಸ್ತೆ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ನಗರವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದಾಗಿ ಬೇರೆ ಬೇರೆ ಉದ್ಯೋಗಗಳು ಸೃಷ್ಠಿಯಾಗಲಿದೆ. ತುಮಕೂರು ಜಿಲ್ಲೆಯ ನಿಟ್ಟೂರು ಬಳಿ ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕ ಹಾಗೂ ಇಸ್ರೋ ತಯಾರಿಕ ಘಟಕದಿಂದ ವಿಶ್ವ ಭೂಪಟದಲ್ಲಿ ಜಿಲ್ಲೆ ಗುರುತಿಸಿಕೊಳ್ಳಲಿದೆ ಎಂದ ಅವರು, ರಾಜ್ಯದಲ್ಲಿರುವ ಸಂಯುಕ್ತ ಸರಕಾರ 50 ಸಾವಿರ ಸಾಲಮನ್ನಾ ಮಾಡಿರುವುದರಿಂದ 22 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದರು.

2013ರಲ್ಲಿ ಸಿದ್ದರಾಮಯ್ಯ ಹಾಗೂ ನಾನು ಹೊಸಪೇಟೆಯಿಂದ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದು, ಪ್ರತಿ ವರ್ಷ ನೀರಾವರಿಗಾಗಿ 10 ಸಾವಿರ ಕೋಟಿ ಹಣವನ್ನು ಮೀಸಲಿಡುವುದಾಗಿ ಹೇಳಿದ್ದೇವೆ. ಅದರಂತೆ ಕಳೆದ ಐದು ವರ್ಷದಲ್ಲಿ  62 ಸಾವಿರ ಕೋಟಿ ಹಣವನ್ನು ಖರ್ಚು ಮಾಡಿದ್ದೇವೆ. ಬಿಜೆಪಿ ಖಜಾನೆಯಲ್ಲಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ. ರಾಜ್ಯ ಬೊಕ್ಕಸ ಸುಭಿಕ್ಷವಾಗಿದೆ. ಸಂಯುಕ್ತ ಸರಕಾರದ ಅವಧಿಯಲ್ಲಿ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಯಾವುದೇ ಅಡಚಣೆ ಇಲ್ಲದೆ ಕಾಮಗಾರಿಗಳು ಸರಾಗವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಇದಕ್ಕೂ ಮುನ್ನ ಸಂಸದ ಮುದ್ದಹನುಮೇಗೌಡ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ, ಐಷಾರಾಮಿ, ಸರಕುಗಳು ಸಾಗಿಸುವ ವಾಹನಗಳು ದ್ವಿಚಕ್ರವಾಹನುಗಳು ರಸ್ತೆಗೆ ಇಳಿದಿದೆ. ಇದೆರಿಂದ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ರೈತರು ಭೂಮಿ ಕಳೆದುಕೊಂಡಿದ್ದಾರೆ. ನನಗೆ ಶಕ್ತಿ ತುಂಬಿದ ಜನರಿಗೆ ಗೌರವ ಸಲ್ಲಿಸಬೇಕಾಗಿರುವುದು ನನ್ನ ಕರ್ತವ್ಯ, ಜನರ ಋಣ ತೀರಿಸಲು, ತೆಂಗು ಹಾಗೂ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಿ ಕೇಂದ್ರ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದಾನೆ ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ಆಗುತ್ತಿವೆ, ಹೆಚ್‍ಎಎಲ್,ಇಸ್ರೋದಿಂದಾಗಿ 10 ಸಾವಿರ ಉದ್ಯೋಗ ಸೃಷ್ಠಿಯಾಗಲಿವೆ, ಅಲ್ಲದೆ 4 ತಿಂಗಳ ಹಿಂದಷ್ಟೇ ಪ್ರಾರಂಭವಾದ ಪಾಪ್‍ಪೋರ್ಟ್ ಸೇವಾಕೇಂದ್ರದಿಂದ ಇದುವರೆಗೆ 10 ಸಾವಿರ ಜನರು ಪಾಸ್‍ಪೋರ್ಟ್ ಪಡೆದುಕೊಂಡಿದ್ದಾರೆ. ಈ ಹಿಂದೆ ಪಾಸ್‍ಪೋರ್ಟ್ ಪಡೆಯಲು ಇದ್ದ ಅಡಚಣೆಗಳು ದೂರವಾಗಿವೆ. ಹುಳಿಯಾರು ಹೆದ್ದಾರಿಯನ್ನು 250 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ರಸ್ತೆ ಕಾಮಗಾರಿಗೆ ರೈತರ ಭೂಮಿಯನ್ನು ವಶಪಡಿಸಿ ಕೊಳ್ಳವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನೂರಾರು ರೈತರು ಪ್ರತಿಭಟನೆಗೆ ಮುಂದಾಗಿದ್ದರು. ಇದನ್ನು ಅರಿತ ಸಂಸದ ಮುದ್ದಹನುಮೇಗೌಡರು ರೈತ ಮುಖಂಡರ ಜೂತೆ ಸುದೀರ್ಘ ಚರ್ಚೆ ನಡೆಸಿ ಸಮಸ್ಯೆ ಬಗೆ ಹರಿಸುವುದರ ಜೂತೆಗೆ ರೈತರ ಎಲ್ಲಾ ಬೇಡಿಕೆಗಳ ಬಗ್ಗೆ ಉಪ ಮುಖ್ಯಮಂತ್ರಿ ಗಳು ಹಾಗೂ ಗೃಹ ಸಚಿವರು ಅದಾ ಡಾ.ಜಿ.ಪರಮೇಶ್ವರ್ ಜೂತೆ ಚರ್ಚೆ ನಡೆಸಿ ತೀರ್ಮಾನ ಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್ ಎಸ್ಪಿ ಡಾ ದಿವ್ಯ ಗೋಪಿನಾಥ್ ಹೆಚ್ಚುವರಿ  ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಶೋಭಾರಾಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಸ್ ಕಣ್ಮಣಿ ಜಾಯ್, ಚೌದ್ರಿರಂಗಪ್ಪ, ತಿಪಟೂರು ಲೋಕೇಶ, ಕೆ ಷಡಕ್ಷರಿ, ಅಡಿಟರ್ ಯಲಚವಾಡಿ ನಾಗರಾಜ್, ಸಾಸಲು ಸತೀಶ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News