ಮಂಗಳೂರು ವಿವಿ ಹಗರಣ ಆರೋಪದ ಬಗ್ಗೆ ತನಿಖೆ ನಡೆಸಿ ಕ್ರಮ: ಸಚಿವ ಜಿ.ಟಿ ದೇವೇಗೌಡ

Update: 2018-12-18 14:14 GMT

ಬೆಳಗಾವಿ, ಡಿ.18: ಮಂಗಳೂರು ವಿವಿ ಯಲ್ಲಿ ನಡೆದಿವೆ ಎನ್ನಲಾದ ಹಗರಣಗಳ ಕುರಿತು ತನಿಖೆ ನಡೆಸಿ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪರೀಕ್ಷಾ ನಿರ್ವಹಣೆ ಗುತ್ತಿಗೆ, ಸೋಲಾರ್ ಉಪಕರಣ, ಕಂಪ್ಯೂಟರ್ ಹಾಗೂ ಸಿಸಿಟಿವಿ ಖರೀದಿ, ಅಕ್ರಮ ನೇಮಕಾತಿಗಳ ಬಗ್ಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆರೋಪ ಮಾಡಿದೆ. ಅದರ ಬಗ್ಗೆ ವಿವಿ ಯಿಂದ ವರದಿ ಪಡೆಯಲಾಗಿದೆ. ಆದರೆ, ಆರೋಪದ ಬಗ್ಗೆ ಯಾವುದೇ ಲಿಖಿತ ದೂರು ಬಂದಿಲ್ಲ ಎಂದರು.

ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸಿ.ಟಿ ರವಿ ಮತನಾಡಿ, ವಿವಿ ಮೇಲಿರುವ ಆರೋಪದ ಬಗ್ಗೆ 3 ನೇ ವ್ಯಕ್ತಿಯಿಂದ ವರದಿ ಪಡೆಯಬೇಕು ಎಂದು ಆಗ್ರಹಿಸಿದರು.

ಆಗ ಸಭಾಧ್ಯಕ್ಷರು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ವಿವಿ ಮೇಲಿರುವ ಆರೋಪದ ಬಗ್ಗೆ ಯಾವ ರೀತಿ ವಿಚಾರಣೆಗೊಳಪಡಿಸಬೇಕು. ಕಾನೂನಿನಲ್ಲಿ ಯಾವ ರೀತಿ ಅವಕಾಶಗಳಿವೆ ಎಂಬ ಸಮಾಲೋಚಿಸಿ ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News