ಲಷ್ಕರೆ ತಯ್ಯಬಕ್ಕೆ ಬೆಂಬಲ ನೀಡಿದ ಪಾಕ್ ಸಚಿವ: ವೀಡಿಯೊ ಬಹಿರಂಗ

Update: 2018-12-18 15:32 GMT

ಇಸ್ಲಾಮಾಬಾದ್, ಡಿ. 18: ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬ ಸ್ಥಾಪಕ ಹಫೀಝ್ ಸಯೀದ್ ಮತ್ತು ಅವನ ರಾಜಕೀಯ ಸಂಘಟನೆ ಮಿಲಿ ಮುಸ್ಲಿಮ್ ಲೀಗ್ (ಎಂಎಂಎಲ್)ಗೆ ಪಾಕಿಸ್ತಾನದ ಗೃಹ ಖಾತೆಯ ಸಹಾಯಕ ಸಚಿವ ಶೆಹರ್ಯಾರ್ ಖಾನ್ ಅಫ್ರಿದಿ ಬೆಂಬಲ ವ್ಯಕ್ತಪಡಿಸಿರುವ ವೀಡಿಯೊವೊಂದು ಬಹಿರಂಗವಾಗಿದೆ.

ಲಷ್ಕರೆ ತಯ್ಯಬವನ್ನು ಅಮೆರಿಕವು ಎಪ್ರಿಲ್‌ನಲ್ಲಿ ಭಯೋತ್ಪಾದಕ ಗುಂಪು ಎಂಬುದಾಗಿ ಘೋಷಿಸಿದೆ.

ಈ ಎರಡು ನಿಮಿಷಗಳ ವೀಡಿಯೊವನ್ನು, ಅಫ್ರಿದಿ ಇತ್ತೀಚೆಗೆ ಎಂಎಂಎಲ್ ನಾಯಕರ ಗುಂಪೊಂದನ್ನು ಭೇಟಿಯಾಗಿದ್ದಾಗ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ನಂಬಲಾಗಿದೆ.

ಶೀಘ್ರದಲ್ಲೇ ನಡೆಯಲಿರುವ ಹಣಕಾಸು ಕ್ರಿಯಾ ಕಾರ್ಯ ಪಡೆ (ಎಫ್‌ಎಟಿಎಫ್) ಮರುಪರಿಶೀಲನಾ ಸಭೆಯಲ್ಲಿ, ಲಷ್ಕರೆ ತಯ್ಯಬ ಮುಂತಾದ ಭಯೋತ್ಪಾದಕ ಗುಂಪುಗಳ ಹಣ ಸಂಗ್ರಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ತನ್ನ ಬದ್ಧತೆಯನ್ನು ಪಾಕಿಸ್ತಾನ ಈಡೇರಿಸಿಲ್ಲ ಎಂಬುದಾಗಿ ದೂರು ಸಲ್ಲಿಸಲು ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳು ಸಿದ್ಧತೆ ನಡೆಸಿರುವ ಹಂತದಲ್ಲೇ ಈ ವೀಡಿಯೊ ಬಹಿರಂಗವಾಗಿದೆ.

ಎಂಎಂಎಲ್‌ನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸುವಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅದರ ನಾಯಕರು ಸಚಿವರಿಗೆ ವಿವರಣೆ ನೀಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News