ಹಾಸನ: ವಸತಿಗೃಹದಲ್ಲಿ ಯುವತಿ ಅನುಮಾನಾಸ್ಪದ ಸಾವು

Update: 2018-12-20 13:42 GMT

ಹಾಸನ,ಡಿ.20: ನಗರದ ಕಟ್ಟಿನಕೆರೆ ಮಾರುಕಟ್ಟೆಯ ಖಾಸಗಿ ವಸತಿಗೃಹವೊಂದರಲ್ಲಿ ಯುವತಿಯೋರ್ವಳು ಅನುಮಾನಸ್ಪದವಾಗಿ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾದ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. 

ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ನಿವಾಸಿ ಚಿರಂತಿ (24) ಎಂಬಾಕೆ ನಗರದ ವಸತಿಗೃಹದಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಯುವತಿ. 

ಈಕೆ ಹಾಸನ ನಗರದ ತಣ್ಣೀರುಹಳ್ಳದ ಬಳಿ ಇರುವ ಬುಲೆಟ್ ಶೋರೂಮ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬುಧವಾರ ರಾತ್ರಿ ತನ್ನ ಗೆಳೆಯ ಆಟೋ ಚಾಲಕ ರಾಕೇಶ್‍ನೊಂದಿಗೆ ನಗರದ ಕಟ್ಟಿನಕೆರೆ ಮಾರುಕಟ್ಟೆಯ ಆವರಣದಲ್ಲಿರುವ ವಸತಿಗೃಹಕ್ಕೆ ಬಂದಿದ್ದಳು. ಆದರೆ ಬೆಳಗ್ಗೆ ಲಾಡ್ಜಿನ ಸ್ನಾನದ ಗೃಹದಲ್ಲಿ ನೇಣಿಗೆ ಶರಣಾದ ರೀತಿ ಪತ್ತೆಯಾಗಿದ್ದಾಳೆ ಎನ್ನಲಾಗಿದೆ. 

ಚಿರಂತಿ ಮದುವೆಯಾಗಿ ಗಂಡನಿಂದ ದೂರವಾಗಿ ನಗರದ ತಳ್ಳೀರುಹಳ್ಳದ ಬುಲೆಟ್ ಶೂ ರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು ಎಂದು ತಿಳಿದು ಬಂದಿದೆ. ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News