ನಾಗಮಂಗಲ: ಟಾಟಾ ಸುಮೋ-ಬೈಕ್ ಮುಖಾಮುಖಿ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

Update: 2018-12-22 14:28 GMT

ನಾಗಮಂಗಲ, ಡಿ.22: ಬೈಕ್ ಮತ್ತು ಟಾಟಾ ಸುಮೋ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ದೇವಲಾಪುರ ರಸ್ತೆಯಲ್ಲಿನ ಹೊಂಬಾಳೆ ಕೊಪ್ಪಲು ಗೇಟ್ ಬಳಿ ಶನಿವಾರ ಸಂಜೆ ನಡೆದಿದೆ.

ನಾಗಮಂಗಲ ಪಟ್ಟಣ ಪುರಸಭೆ ವ್ಯಾಪ್ತಿಯ 17ನೇ ವಾರ್ಡ್ ಸಾರೆಮೇಗಲಕೊಪ್ಪಲು ವಾಸಿ ಕೆಂಪೇಗೌಡ( ಧರ್ಮ)(30) ಮೃತ ವ್ಯಕ್ತಿ. ಇವರು ನಾಗಮಂಗಲ ಕಡೆಯಿಂದ ದೇವಲಾಪುರಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಎದುರು ಕಡೆಯಿಂದ ಬರುತ್ತಿದ್ದ ಟಾಟಾ ಸುಮೋ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಈ ಸಂಬಂಧ ಗ್ರಾಮಾಂತರ  ಠಾಣೆ ಪಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News