ಸುಡಾನ್: ಸರಕಾರ ವಿರೋಧಿ ಪ್ರತಿಭಟನೆ 4ನೇ ದಿನಕ್ಕೆ

Update: 2018-12-23 18:31 GMT

ಕೈರೋ (ಈಜಿಪ್ಟ್), ಡಿ. 23: ಸುಡಾನ್‌ನಲ್ಲಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ವಿರೋಧಿಸಿ ಸತತ ನಾಲ್ಕನೇ ದಿನವಾದ ಶನಿವಾರವೂ ಪ್ರತಿಭಟನೆ ಮುಂದುವರಿಯಿತು.

ರಾಜಧಾನಿ ಖಾರ್ತೂಮ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಸುಡಾನ್‌ನಲ್ಲಿ ಅಧ್ಯಕ್ಷ ಉಮರ್ ಬಶೀರ್ 29 ವರ್ಷಗಳಿಂದ ಇಸ್ಲಾಮಿಕ್ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ಪ್ರತಿಭಟನೆಯನ್ನು ಅಮಾನುಷವಾಗಿ ಹತ್ತಿಕ್ಕಿದ ಇತಿಹಾಸವನ್ನು ಅವರು ಹೊಂದಿದ್ದಾರೆ.

ಅಧ್ಯಕ್ಷರು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಕಾರರು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News