ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ: ಜ.4, 5ರಂದು ಧಾರವಾಡದ ಶಾಲಾ-ಕಾಲೇಜಿಗೆ ರಜೆ

Update: 2019-01-01 14:49 GMT

ಧಾರವಾಡ, ಜ.1: ಅಖಿಲ ಭಾರತ 84ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳಲು ಅನುಕೂಲ ವಾಗುಂತೆ ಜ.4 ಶುಕ್ರವಾರ ಮತ್ತು ಜ.5 ಶನಿವಾರದಂದು ಎರಡು ದಿನಗಳ ಕಾಲ ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ಸ್ಥಾನಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಮುಕ್ತ ಪ್ರಕಟಣಾ ಮಾಲಿಕೆ ಯೋಜನೆ ಅಡಿ ಪುಸ್ತಕಗಳ ಪ್ರಕಟಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಂಶೋಧಕ ಮತ್ತು ಅಧ್ಯಯನಶೀಲರ ಇಚ್ಛೆಯ ವಿಷಯದ ಕುರಿತ ರಚಿಸಲಾದ ಕೃತಿಗಳನ್ನು ಪ್ರಕಟಿಸುವ ‘ಮುಕ್ತ ಪ್ರಕಟಣಾ ಮಾಲಿಕೆ ಯೋಜನೆ’ ರೂಪಿಸಿದೆ.

ಈ ಯೋಜನೆ ಮೂಲಕ ಸಂಶೋಧಕರ ಸೃಜನೇತರ ಸಾಹಿತ್ಯವನ್ನು ಪ್ರಕಟಿಸಲು ಅಕಾಡೆಮಿ ಮುಂದಾಗಿದೆ. ಇದುವರೆಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ತಜ್ಞರಿಗೆ ವಿಷಯ ನೀಡಿ, ಬಳಿಕ ಅವರು ಸಂಶೋಧನೆ ನಡೆಸಿ ನೀಡಿದ ಕೃತಿಗಳನ್ನು ಪ್ರಕಟಿಸುತ್ತಿತ್ತು. ಆಸಕ್ತರಿಗೆ ಫೆಲೋಶಿಪ್ ನೀಡಿ, ಅವರಿಗೆ ಮಾರ್ಗದರ್ಶಕರನ್ನು ಒದಗಿಸಿ ಹಾಗೂ ಕೃತಿಗಳನ್ನು ಬರೆಸಿ ಹಾಗೂ ಬಿಡಿ ಲೇಖನಗಳನ್ನು ಸಂಪಾದನೆ ಮಾಡಿ ಪುಸ್ತಕ ಪ್ರಕಟಣೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಅಕಾಡೆಮಿ ನೂತನ ಯೋಜನೆ ಮೂಲಕ ಸಂಶೋಧಕರು ತಮ್ಮ ಇಚ್ಛೆಯ ವಿಷಯದ ಕುರಿತು ನಡೆಸಿದ ಸಂಶೋಧನಾತ್ಮಕ ಕೃತಿಗಳನ್ನು ಪ್ರಕಟಿಸಲು ಆಸಕ್ತಿ ತೋರಿದೆ. ಕಥೆ, ಕವನ, ಕಾವ್ಯ, ನಾಟಕ, ಅನುವಾದ ಸೇರಿದಂತೆ ಸೃಜನಶೀಲ ಸಾಹಿತ್ಯ ಪ್ರಕಾರದ ಕೃತಿಗಳನ್ನು ಮುಕ್ತ ಪ್ರಕಟಣಾ ಮಾಲಿಕೆಯಲ್ಲಿ ಹೊರ ತರಲಾಗುವುದಿಲ್ಲ. ವಿಮರ್ಶೆ, ಪ್ರವಾಸ ಕಥನ, ಸಂಶೋಧನಾತ್ಮಕ ಬರಹಗಳು, ವೈಚಾರಿಕ ಬರಹಗಳು ಸೇರಿದಂತೆ ಸೃಜನೇತರ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಅಕಾಡೆಮಿ ಪ್ರಕಟಿಸಲಿದೆ.

150 ಪುಟಗಳ ಮಿತಿ: ಮುಕ್ತ ಪ್ರಕಟಣಾ ಮಾಲಿಕೆಯಲ್ಲಿ ಇಷ್ಟೇ ಸಂಖ್ಯೆಯ ಪುಸ್ತಕಗಳನ್ನು ಪ್ರಕಟಿಸಬೇಕು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ. ಅಕಾಡೆಮಿ ರಚಿಸುವ ಸಮಿತಿ ಆಯ್ಕೆ ಮಾಡಿದ ಬರಹಗಳಷ್ಟನ್ನು ಕೃತಿಗಳ ರೂಪದಲ್ಲಿ ಹೊರ ತರಲಾಗುವುದು. 150 ಪುಟಗಳ ಮಿತಿಯಲ್ಲಿ ಒಂದೊಂದು ವಿಷಯಕ್ಕೆ ಸಂಬಂಧಿಸಿದ ಪ್ರತ್ಯೇಕ ಕೃತಿಗಳನ್ನು ಪ್ರಕಟಿಸಲಾಗುವುದು.

15 ಲಕ್ಷ ಮೀಸಲು: ಸಾಹಿತ್ಯ ಅಕಾಡೆಮಿಯು ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶಕ್ಕೆಂದೇ 15 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ. ಈ ಹಣದಲ್ಲಿಯೇ ಮುಕ್ತ ಪ್ರಕಟಣಾ ಮಾಲಿಕೆಯ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

ಪ್ರಬುದ್ಧವಾದ ವಿಷಯಗಳ ಬಗ್ಗೆ ಸರಳವಾದ ನಿರೂಪಣೆ ಇರಬೇಕು. ಭಾಷೆ ಸರಳವಾಗಿರಬೇಕು. ಪ್ರವಾಸ ಕಥನಗಳನ್ನು ಕಳುಹಿಸುವವರು ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ನೀಡಬೇಕು. ವೈಚಾರಿಕ ಬರಹಗಳಾಗಿದ್ದಲ್ಲಿ ಸಂಖ್ಯೆಗಳು ಮತ್ತು ದಾಖಲೆಗಳಿಗೆ ಪ್ರಾದಾನ್ಯತೆ ನೀಡಬೇಕು. ಲೇಖಕರು ಬಳಸಿಕೊಂಡ ಆಕಾರಗಳ ಬಗ್ಗೆಯೂ ಮಾಹಿತಿ ನೀಡಿದರೆ ಉತ್ತಮ ಎಂದು ತಮ್ಮ ಬರಹಗಳನ್ನು ಕಳುಹಿಸಲು ಇಚ್ಛಿಸುವವರಿಗೆ ಅಕಾಡೆಮಿ ಸಲಹೆ ನೀಡಿದೆ.
ಫೆ.28ರ ವರೆಗೂ ಅವಕಾಶ: ಯಾವುದೇ ಪದವಿಗೆ ಸಾದರಪಡಿಸಿದ ಸಂಶೋಧನಾತ್ಮಕ ಪ್ರಬಂಧಗಳು 150 ಪುಟಗಳ ಮಿತಿಯೊಳಗೆ ಇದ್ದರೆ ಅಂತಹವುಗಳನ್ನು ಪರಿಶೀಲಿಸಲಾಗುವುದು. ಈ ಕೃತಿಗಳು ಎಲ್ಲಿಯೂ ಪೂರ್ಣವಾಗಿ ಅಥವಾ ಬಿಡಿ ಬಿಡಿಯಾಗಿ ಪ್ರಕಟವಾಗಿರಬಾರದು. ಆಸಕ್ತರು ಕೃತಿಗಳನ್ನು ಕಳುಹಿಸಲು ಫೆ.28ರವರೆಗೂ ಅವಕಾಶ ನೀಡಲಾಗಿದೆ.

ಪ್ರಬುದ್ಧ ಕೃತಿಗಳಿಗೆ ಮಾನ್ಯತೆ: ಸ್ವಯಂ ಆಸಕ್ತಿಯಿಂದ ಮಾಡಿರುವಂತಹ ಸಂಶೋಧನಾತ್ಮಕ ಕಾರ್ಯಗಳು ಹೆಚ್ಚು ಪ್ರಬುದ್ಧವಾಗಿರುತ್ತವೆ. ನಿರ್ದಿಷ್ಟ ವಿಷಯದ ನಿರ್ಬಂಧವಿಲ್ಲದಿರುವುದರಿಂದ ಯಾವುದೇ ಆಂತರಿಕ ಒತ್ತಡವಿಲ್ಲದೆ ಅವು ರೂಪುಗೊಂಡಿರುತ್ತವೆ. ಹೀಗಾಗಿ ಪ್ರಕಟಣೆಗೆ ಅಕಾಡೆಮಿ ತೀರ್ಮಾನಿಸಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News