ಮೇಘಾಲಯ ಗಣಿ ದುರಂತ: ಪಂಪ್‌ಗಳ ತಾಂತ್ರಿಕ ದೋಷ; ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

Update: 2019-01-01 15:04 GMT

 ಶಿಲ್ಲಾಂಗ್, ಜ. 1: ಅತ್ಯಧಿಕ ಸಾಮರ್ಥ್ಯದ ಪಂಪ್‌ಗಳ ತಾಂತ್ರಿಕ ದೋಷದ ಕಾರಣದಿಂದ ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಜಲಾವೃತ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಹಲವು ರಕ್ಷಣಾ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಹಿನ್ನಡೆ ಉಂಟಾಗಿದೆ.

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ 370 ಅಡಿ ಆಳದ ಕಾನೂನು ಬಾಹಿರ ಕಲ್ಲಿದ್ದಲು ಗಣಿ ಗೋಡೆ ರಂಧ್ರ ಮಾಡಿ ಸಮೀಪದ ನದಿಯ ನೀರು ನುಗ್ಗಿದ ಪರಿಣಾಮ 15 ಮಂದಿ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದಾರೆ. 20ನೇ ದಿನ ಎನ್‌ಡಿಆರ್‌ಎಫ್‌ನ ನೆರವಿನೊಂದಿಗೆ ಭಾರತೀಯ ನೌಕಾ ಪಡೆ ಸಿಬ್ಬಂದಿ ಮಾನವ ರಹಿತ ರಿಮೋಟ್‌ನಲ್ಲಿ ನಿರ್ವಹಿಸುವ ವಾಹನದಲ್ಲಿ ಮುಳುಗುವ ಮೂಲಕ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿದ್ದಾರೆ ಎಂದು ಕಾರ್ಯಾಚರಣೆಯ ವಕ್ತಾರ ಆರ್. ಸುಸಂಗಿ ತಿಳಿಸಿದ್ದಾರೆ.

ಯಂತ್ರಗಳಲ್ಲಿ ಕೆಲವು ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಈ ಸುರಂಗ 370 ಅಡಿ ಆಳವಿದೆ. ಇದರ ಒಳಗಡೆ 161 ಅಡಿ ನೀರು ತುಂಬಿಕೊಂಡಿದೆ ಎಂದು ನೌಕಾ ಪಡೆಯ ಮಾಹಿತಿ ಆಧರಿಸಿ ಅವರು ತಿಳಿಸಿದ್ದಾರೆ. ಪಂಪ್‌ಗಳು ಸಿದ್ಧವಾದ ಕೂಡಲೇ ಕಾರ್ಯಾಚರಣೆ ಆರಂಭಿಸಲಾಗುವುದು. ಸಮೀಪದ ಎರಡು ಸುರಂಗದಲ್ಲಿರುವ ನೀರು ಖಾಲಿ ಮಾಡಲು ಒರಿಸ್ಸಾದ ಅಗ್ನಿಶಾಮಕ ದಳ ಸಿದ್ಧತೆ ನಡೆಸುತ್ತಿದೆ. ಗಣಿ ಸುರಂಗದಲ್ಲಿ ನೀರಿನ ಪ್ರಮಾಣ ಸ್ಪಲ್ಪ ಕಡಿಮೆಯಾಗಿದೆ ಎಂದು ಸುಸಂಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News