ದಾವಣಗೆರೆ: ಮನೆಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

Update: 2019-01-04 19:08 GMT

ದಾವಣಗೆರೆ,ಜ.4: ಇಲ್ಲಿನ ವಿದ್ಯಾನಗರದ ಮನೆಯೊಂದರ ಬೀಗ ಮುರಿದು ಸುಮಾರು 10.62 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ  ಘಟನೆ ನಡೆದಿದೆ.

ವಿದ್ಯಾನಗರದ 9ನೇ ಕ್ರಾಸ್‍ನಲ್ಲಿರುವ ಭಾರತಿ ಎಂಬುವರ ಅಮ್ಮನವರು ಮೃತಪಟ್ಟಿದ್ದ ಹಿನ್ನಲೆಯಲ್ಲಿ ಜ.1ರಂದು ಭಾರತಿ ಅವರು ಮನೆಯ ಬೀಗ ಹಾಕಿ, ಮಗಳು ಹಾಗೂ ಅಳಿಯನೊಂದಿಗೆ ಪಿ.ಜೆ.ಬಡಾವಣೆಯಲ್ಲಿರುವ ಅವರ ಸಹೋದರನ ಮನೆಗೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಜ. 2ರಂದು ರಾತ್ರಿ 10.30ಕ್ಕೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯ ಇಂಟರ್ ಲಾಕ್ ಮುರಿದು, ಮನೆಯಲ್ಲಿನ ಬಿರುಗಳ ಲಾಕರ್ ಮುರಿದು ಅದರಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಸುಮಾರು 10.62 ಲಕ್ಷ ರೂ. ಮೌಲ್ಯದ ಚಿನ್ನದ ಮುತ್ತಿನ ಬಳೆ, ದುಬೈ ಕಟಿಂಗ್ ಬಂಗಾರದ ಬಳೆ, ನಕ್ಲೇಸ್, ಕಿವಿಯೊಲೆ, ಚಿನ್ನದ ಕಾಸು ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News