ಪೌರತ್ವ ಮಸೂದೆಗೆ ವಿರೋಧ: ಬಿಜೆಪಿ ಜೊತೆ ಮೈತ್ರಿ ಮುರಿದ ಎಜಿಪಿ

Update: 2019-01-07 13:59 GMT

ಗುವಾಹಟಿ, ಜ.7: ವಿವಾದಾತ್ಮಕ ಪೌರತ್ವ ಮಸೂದೆಯನ್ನು ವಿರೋಧಿಸಿ ಬಿಜೆಪಿ ನೇತೃತ್ವದ ಅಸ್ಸಾಂ ಸರಕಾರದೊಂದಿಗೆ ಮಿತ್ರಪಕ್ಷವಾದ ಅಸೋಮ್ ಗಣ ಪರಿಷದ್ (ಎಜಿಪಿ) ಮೈತ್ರಿ ಮುರಿದುಕೊಂಡಿದೆ.

“ಮಸೂದೆಯನ್ನು ವಿರೋಧಿಸಲು ನಾವು ಸಾಧ್ಯವಾದಷ್ಟು ಪ್ರಯತ್ನ ಮಾಡಿದೆವು. ನಿತೀಶ್ ಕುಮಾರ್ ಮತ್ತು ಶಿವಸೇನೆಯಿಂದ ನಮಗೆ ಬೆಂಬಲವಿತ್ತು. ಇಂದು ಮಸೂದೆ ವಿರುದ್ಧದ ಪ್ರತಿಭಟನೆಯಲ್ಲಿ ಅಸ್ಸಾಂ ಹೊತ್ತಿ ಉರಿಯುತ್ತಿದ್ದರೆ ಬಿಜೆಪಿ ಅಸ್ಸಾಂ ಜನರ ಭಾವನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಆದ್ದರಿಂದ ಬಿಜೆಪಿ ಜೊತೆ ಮೈತ್ರಿ ಮುಂದುವರಿಸಲು ಸಾಧ್ಯವಿಲ್ಲ” ಎಂದು ಎಜಿಪಿ ಅಧ್ಯಕ್ಷ ಹಾಗು ಕೃಷಿ ಸಚಿವ ಅತುಲ್ ಬೋರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News