ಕರ್ತವ್ಯ ಲೋಪ ಆರೋಪ: ಚಿಕ್ಕಮಗಳೂರು ನಗರ ಠಾಣೆ ಪಿಎಸ್ಐ ಅಮಾನತು

Update: 2019-01-09 11:37 GMT
ಪಿಎಸ್ಐ ರಘು

ಚಿಕ್ಕಮಗಳೂರು, ಜ.9: ಕರ್ತವ್ಯ ಲೋಪ ಎಸಗಿದ ಆರೋಪದಡಿಯಲ್ಲಿ ಇಲ್ಲಿನ ನಗರ ಠಾಣೆಯ ಪಿಎಸ್ಐ ರಘು ಅವರನ್ನು ಅಮಾನತುಗೊಳಿಸಿ ಪೊಲೀಸ್ ಇಲಾಖಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು ನಗರ ಠಾಣೆಯ ಪಿಎಸ್ಐ ಅವರು ಕರ್ತವ್ಯ ಲೋಪ ಎಸಗಿರುವ ಆರೋಪದ ಬಗ್ಗೆ ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ ನೇತೃತ್ವದ ತಂಡ ಆಂತರಿಕ ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಪಿಎಸ್ಐ ರಘು ಅವರು ಪೊಲೀಸ್ ಬೀಟ್ ನಿರ್ವಹಣೆಯನ್ನು ನಿಯಮಾನುಸಾರ ಮಾಡುವಲ್ಲಿ ಲೋಪ ಎಸಗಿರುವುದರಿಂದ ಅವರ ಮೇಲೆ ಶಿಸ್ತುಕ್ರಮದ ರೂಪದಲ್ಲಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರೇಕುಡಿಗೆ ಶಿವಣ್ಣ ಎಂಬವರ ಮೇಲೆ ನಗರ ಠಾಣೆಯ ಪಿಎಸ್ಐ ಸೇರಿದಂತೆ ಪೇದೆಗಳು ಹಲ್ಲೆ ಮಾಡಿದ್ದರೆಂಬ ಆರೋಪ ಕೇಳಿ ಬಂದಿದ್ದು, ಪಿಎಸ್ಐ ವಿರುದ್ಧ ಕಾನೂನು ಕ್ರಮವಹಿಸಬೇಕೆಂದು ಬಿಜೆಪಿ ಮುಖಂಡರು ಎಸ್ಪಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News