ರಾಜ್ಯ ಸರಕಾರ ಒಂದು ಧರ್ಮದ ಪರವಾಗಿ ಕಾರ್ಯನಿರ್ವಹಿಸುತ್ತಿದೆ: ಜಗದೀಶ್ ಶೆಟ್ಟರ್ ಆರೋಪ

Update: 2019-01-09 14:25 GMT

ಹುಬ್ಬಳ್ಳಿ, ಜ.9: ರಾಜ್ಯ ಸರಕಾರ ವೋಟ್‌ಗಾಗಿ ಒಂದು ಧರ್ಮದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ನಗರದ ಪ್ರಮುಖ ರಸ್ತೆಯಲ್ಲಿರುವ ಪ್ರಾರ್ಥನಾ ಮಂದಿರವನ್ನು ತೆರವು ಕಾರ್ಯಕ್ಕೆ ಮುಂದಾಗಿಲ್ಲವೆಂದು ಉಪಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ನಗರಿ ಹುಬ್ಬಳ್ಳಿಗೆ ಕೇಂದ್ರದ ಸಿಆರ್‌ಎಫ್‌ನಿಂದ ಸಾಕಷ್ಟು ಹಣ ಬಿಡುಗಡೆ ಆಗಿದ್ದು, ಅದರ ಸದ್ಬಳಕೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲ ಮನ್ನಾ ಮಾಡುವ ನಾಟಕ ಆಡುತ್ತಿದ್ದಾರೆ. ಈವರೆಗೂ ರೈತರಿಗೆ ಸರಿಯಾದ ಸಾಲ ಮನ್ನಾ ಆಗಿಲ್ಲ. ಬಡವರ ಬಂಧು ಯೋಜನೆ ಒಂದು ಶುದ್ಧ ಸುಳ್ಳು. ಬಡವರ ಬಂಧು ಯೋಜನೆಯಲ್ಲಿ ಸಹಕಾರಿ ಸಂಘಗಳಿಂದ ಹಣ ಕೊಡಿಸಲು ಹೊರಟಿದ್ದಾರೆ. ಇದು ಆಗದ ಮಾತೆಂದು ಅವರು ಆರೋಪಿಸಿದರು.

ಸಹಕಾರಿ ಬ್ಯಾಂಕ್‌ಗಳಲ್ಲಿ ಸದಸ್ಯರಲ್ಲದವರಿಗೆ ಹಣ ನೀಡಲ್ಲ ಎನ್ನುವ ಸಾಮಾನ್ಯ ಜ್ಞಾನ ಕೂಡ ಮುಖ್ಯಮಂತ್ರಿಗಳಿಗೆ ಇಲ್ಲವಾಗಿದೆ. ಸಹಕಾರಿ ಬ್ಯಾಂಕ್‌ಗಳಿಗೆ ಅಧಿಕಾರಿಗಳಿಂದ ಬೆದರಿಕೆ ಹಾಕಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈಗ ಕೇವಲ 20 ಜನರಿಗೆ ಮಾತ್ರ ಹಣ ನೀಡಿದ್ದಾರೆ. ಈ ಯೋಜನೆಯಿಂದ ಯಾರಿಗೂ ಉಪಯೋಗ ಆಗಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News