ಭಾರತ ಮೂಲದ ಹತ ಪೊಲೀಸ್ ಅಧಿಕಾರಿ ಅಮೆರಿಕದ ಹೀರೋ ಎಂದ ಟ್ರಂಪ್

Update: 2019-01-09 14:55 GMT

ವಾಶಿಂಗ್ಟನ್, ಜ. 9: ತನ್ನ ಮಹತ್ವಾಕಾಂಕ್ಷೆಯ ಮೆಕ್ಸಿಕೊ ಗಡಿ ಗೋಡೆ ನಿರ್ಮಾಣ ಎಷ್ಟು ಅವಶ್ಯಕ ಎನ್ನುವುದನ್ನು ಮನದಟ್ಟು ಮಾಡುವ ಪ್ರಯತ್ನವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ರಿಸ್ಮಸ್ ರಾತ್ರಿ ಹತ್ಯೆಗೀಡಾದ ಭಾರತ ಮೂಲದ ಪೊಲೀಸ್ ಅಧಿಕಾರಿಯ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.

ಕ್ರಿಸ್ಮಸ್ ರಾತ್ರಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದ 33 ವರ್ಷದ ಕಾರ್ಪೋರಲ್ ರೊನಿಲ್ ಸಿಂಗ್‌ರನ್ನು ವಾಹನ ತಪಾಸಣೆಯ ವೇಳೆ ಅಕ್ರಮ ವಲಸಿಗನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದನು. ಪೊಲೀಸ್ ಅಧಿಕಾರಿಯು ವಾಹನ ನಿಲ್ಲಿಸಿದಾಗ ಅಕ್ರಮ ವಲಸಿಗನು ಮೆಕ್ಸಿಕೊಗೆ ತಪ್ಪಿಸಿಕೊಂಡು ಹೋಗಲು ಯತ್ನಿಸುತ್ತಿದ್ದನು.

‘‘ಕ್ರಿಸ್ಮಸ್ ರಾತ್ರಿ ಕ್ಯಾಲಿಫೋರ್ನಿಯದಲ್ಲಿ ಯುವ ಪೊಲೀಸ್ ಅಧಿಕಾರಿಯನ್ನು ಅಕ್ರಮ ವಲಸಿಗನೊಬ್ಬ ಬರ್ಬರವಾಗಿ ಹತ್ಯೆಗೈದಾಗ ಅಮೆರಿಕದ ಎದೆಯೊಡೆಯಿತು. ಅಮೆರಿಕದ ಹೀರೋ ಒಬ್ಬನ ಜೀವವನ್ನು ನಮ್ಮ ದೇಶದಲ್ಲಿ ಇರುವ ಹಕ್ಕಿಲ್ಲದ ಓರ್ವ ದೋಚಿದನು’’ ಎಂದು ಶ್ವೇತಭವನದ ಓವಲ್ ಕಚೇರಿಯಿಂದ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News