ಏರ್ ಇಂಡಿಯಾ ಮಾರಾಟದಿಂದ 7,000 ಕೋ.ರೂ.: ಸರಕಾರದ ನಿರೀಕ್ಷೆ

Update: 2019-01-09 14:46 GMT

ಹೊಸದಿಲ್ಲಿ,ಜ.9: ಮುಂದಿನ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಮಾರಾಟದಿಂದ ಸುಮಾರು 7,000 ಕೋ.ರೂ. ಲಭಿಸಲಿದೆ ಎಂದು ಸರಕಾರವು ನಿರೀಕ್ಷಿಸಿದೆ.

ಸರಕಾರವು 2019-20ನೇ ಸಾಲಿನ ಉತ್ತರಾರ್ಧದಲ್ಲಿ ಏರ್ ಇಂಡಿಯಾದ ಹೂಡಿಕೆ ಹಿಂದೆಗೆತ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಮತ್ತು ಅದಕ್ಕೂ ಮುನ್ನ ಸರಕಾರವು ಅದರ ಕೆಲವು ಅಂಗಸಂಸ್ಥೆಗಳು ಮತ್ತು ಆಸ್ತಿಗಳ ಮಾರಾಟಕ್ಕೆ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸರಕಾರಿ ಅಧಿಕಾರಿಯೋರ್ವರು ಬುಧವಾರ ಇಲ್ಲಿ ತಿಳಿಸಿದರು.

ಏರ್ ಇಂಡಿಯಾದ ಮೇಲೆ 55,000 ಕೋ.ರೂ.ಗಳ ಸಾಲದ ಹೊರೆಯಿದೆ. ಕಳೆದ ವರ್ಷದ ನವಂಬರ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಸಮಿತಿಯು ಏರ್ ಇಂಡಿಯಾದ 29,000 ಕೋ.ರೂ.ಸಾಲವನ್ನು ಆರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಕಂಪನಿಗೆ ವರ್ಗಾಯಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿತ್ತು.

ಸರಕಾರವು ಕಳೆದ ವರ್ಷದ ಮೇ ತಿಂಗಳಿನಲ್ಲಿ ಏರ್‌ಇಂಡಿಯಾ ಮಾರಾಟಕ್ಕೆ ವಿಫಲ ಪ್ರಯತ್ನ ನಡೆಸಿತ್ತು.

2018,ಆಗಸ್ಟ್‌ನಲ್ಲಿ ಏರ್ ಇಂಡಿಯಾದ ಪುನಃಶ್ಚೇತನಕ್ಕಾಗಿ 980 ಕೋ.ರೂ.ಗಳನ್ನು ಒದಗಿಸುವ ಪ್ರಸ್ತಾವಕ್ಕೆ ಸಂಸತ್ತು ಒಪ್ಪಿಗೆ ನೀಡಿತ್ತು. ಈ ತಿಂಗಳ ಆರಂಭದಲ್ಲಿ ಏರ್ ಇಂಡಿಯಾಕ್ಕೆ 2,345 ಕೋ.ರೂ.ಗಳ ಪಾಲು ಬಂಡವಾಳ ಒದಗಿಸುವ ಪ್ರಸ್ತಾವವನ್ನೂ ಸಂಸತ್ತು ಒಪ್ಪಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News