ತಪ್ಪು ವರದಿ ಆಧಾರದಲ್ಲಿ ಅಲೋಕ್ ನಾಥ್ ವಿರುದ್ಧ ಪ್ರಕರಣದ ದಾಖಲು: ನ್ಯಾಯಾಲಯ

Update: 2019-01-09 15:08 GMT

ಮುಂಬೈ, ಜ. 9: ಅಲೋಕ್‌ನಾಥ್ ವಿರುದ್ಧ ಅತ್ಯಾಚಾರ ಪ್ರಕರಣವನ್ನು ವಿಂಟಾ ನಂದಾ ಅವರ ‘ಮಾನ ಹಾನಿಕರ’ ಹಾಗೂ ‘ತಪ್ಪು’ ವರದಿಯ ಆಧಾರದಲ್ಲಿ ದಾಖಲಿಸಲಾಗಿದೆ ಎಂದು ಬಾಲಿವುಡ್ ನಟನಿಗೆ ನಿರೀಕ್ಷಣಾ ಜಾಮೀನು ನೀಡಿ ಸೆಷನ್ಸ್ ನ್ಯಾಯಾಲಯ ಹೇಳಿದೆ.

ನಾಥ್ ಅವರಿಗೆ 5 ಲಕ್ಷ ರೂಪಾಯಿ ಶೂರಿಟಿ ಮೇಲೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಸ್. ಓಜಾ, ಚಿತ್ರಕಥೆ ರಚನಗಾರ್ತಿ ‘ವೈಯುಕ್ತಿಕ ದ್ವೇಷ’ದಿಂದ ಅತ್ಯಾಚಾರದ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ದೂರುದಾರೆ ‘ಅವಿಧೇಯ ಹಾಗೂ ಏಕಮುಖ ಪ್ರೀತಿ’ ಯಿಂದ ನಿರಾಶೆಗೊಂಡು ದೂರಿನಲ್ಲಿ ಈ ಆರೋಪ ಎತ್ತಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ದೂರುದಾರೆಯ ಕಲ್ಪನಾತ್ಮಕ, ಅವಮಾನಕರ, ದುರುದ್ದೇಶಪೂರಿತ, ತಪ್ಪು ಮಾನಹಾನಿಕರ ವರದಿಯ ಆಧಾರದಲ್ಲಿ ನಟನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News