ವಿಧಾನಸಭೆ ಚುನಾವಣೆ ಪ್ರಧಾನಿಗೆ ರೈತರ ಶಕ್ತಿ ಪ್ರದರ್ಶಿಸಿದೆ: ರಾಹುಲ್ ಗಾಂಧಿ

Update: 2019-01-09 15:11 GMT

ಹೊಸದಿಲ್ಲಿ, ನ. 9: ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇತ್ತೀಚೆಗಿನ ವಿಧಾನ ಸಭೆ ಚುನಾವಣೆಯಲ್ಲಿ ರೈತರು ತಮ್ಮ ಶಕ್ತಿಯನ್ನು ಪ್ರಧಾನಿ ಅವರಿಗೆ ಪ್ರದರ್ಶಿಸಿದ್ದಾರೆ ಎಂದಿದ್ದಾರೆ.

ಕಳೆದ ತಿಂಗಳು ಮೂರು ನಿರ್ಣಾಯಕ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್‌ಗಡದಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೋತಿದೆ ಎಂದು ಅವರು ಹೇಳಿದರು.

ಸಾಲ ಮನ್ನಾ ಕೃಷಿ ಬಿಕ್ಕಟ್ಟನ್ನು ಪರಿಹರಿಸುವಲ್ಲಿನ ಒಂದು ಚಿಕ್ಕ ಹೆಜ್ಜೆ. ಕೃಷಿ ಬಿಕ್ಕಟ್ಟು ಎದುರಿಸಲು ನೂತನ ಹಸಿರು ಕ್ರಾಂತಿಯ ಅಗತ್ಯತೆ ಇದೆ ಎಂದು ಅವರು ಹೇಳಿದರು. ಬಹುಕೋಟಿ ಮೊತ್ತದ ರಫೇಲ್ ಒಪ್ಪಂದ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳದೇ ಇರುವುದಕ್ಕೆ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ರಫೇಲ್ ವಿವಾದದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭ ಚೌಕಿದಾರ್ ಒಂದು ನಿಮಿಷ ಕೂಡ ನಿಲ್ಲಲಿಲ್ಲ ಎಂದರು. ‘‘ರಫೇಲ್ ಒಪ್ಪಂದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ನಾವು ಆಗ್ರಹಿಸುತ್ತೇವೆ.’’ ಎಂದು ಹೇಳಿದ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಚರ್ಚೆಯ ಸಂದರ್ಭ ನನ್ನ ಪ್ರಶ್ನೆಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News