ಇರಾನ್ ಪರ ಬೇಹುಗಾರಿಕೆ: ಇಸ್ರೇಲ್ ಮಾಜಿ ಸಚಿವಗೆ 11 ವರ್ಷ ಜೈಲು

Update: 2019-01-09 16:48 GMT

ಜೆರುಸಲೇಮ್, ಜ. 9: ಇಸ್ರೇಲ್‌ನ ಬದ್ಧ ವೈರಿ ಇರಾನ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಇಸ್ರೇಲ್‌ನ ಮಾಜಿ ಸಚಿವ ಗೊನೆನ್ ಸೆಗೆವ್, ಪ್ರಾಸಿಕ್ಯೂಶನ್ ಜೊತೆಗೆ ಚೌಕಾಸಿಗೆ ಮುಂದಾಗಿದ್ದಾರೆ. ಇದು ಯಶಸ್ವಿಯಾದರೆ ಅವರು 11 ವರ್ಷಗಳ ಜೈಲು ವಾಸ ಅನುಭವಿಸುತ್ತಾರೆ ಎಂದು ಕಾನೂನು ಸಚಿವಾಲಯ ಬುಧವಾರ ತಿಳಿಸಿದೆ.

ಸಂಧಾನದ ಪ್ರಕಾರ, ಇರಾನ್ ಪರವಾಗಿ ಬೇಹುಗಾರಿಕೆ ನಡೆಸಿದ ಹಾಗೂ ಶತ್ರು ರಾಷ್ಟ್ರಕ್ಕೆ ಮಾಹಿತಿ ರವಾನಿಸಿದ ಗಂಭೀರ ಆರೋಪಗಳನ್ನು ಗೊನೆನ್ ಒಪ್ಪಿಕೊಳ್ಳುತ್ತಾರೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಶಿಕ್ಷೆಯ ಪ್ರಮಾಣದ ವಿಚಾರಣೆಯು ಫೆಬ್ರವರಿ 11ರಂದು ನಡೆಯಲಿದೆ.

ಅವರು 1995ರಿಂದ 1996ರವರೆಗೆ ಇಂಧನ ಮತ್ತು ಮೂಲಸೌಕರ್ಯ ಸಚಿವರಾಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News