ದಾವಣಗೆರೆ: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಲವೆಡೆ ಪ್ರತಿಭಟನೆ

Update: 2019-01-10 11:02 GMT

ದಾವಣಗೆರೆ,ಜ.9: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಎರಡನೇ ದಿನವೂ ಹಲವಡೆ ಪ್ರತಿಭಟನೆ ನಡೆಯಿತು.

ಜಯದೇವ ವೃತ್ತದಲ್ಲಿ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಇಲ್ಲಿನ ಗಡಿಯಾದ ಕಂಬದ ಬಳಿ ಸುಮಾರು 4 ತಾಸಿಗೂ ಹೆಚ್ಚು ಕಾಲ ಕಾರ್ಮಿಕ ಸಂಘಟನೆಗಳು ಮುಷ್ಕರ ನಡೆಸಿ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಬಹಿರಂಗ ಸಭೆ ನಡೆಸಿದರು.  

ಈ ವೇಳೆ ಮಂಜುನಾಥ ಕುಕ್ಕುವಾಡ, ಎಂ.ಬಿ.ಶಾರದಮ್ಮ, ಕೆ.ಎಚ್. ಅನಂದರಾಜ್ ಮಾತನಾಡಿದರು.    

ಕಾರ್ಮಿಕ ಮುಖಂಡರಾದ ಕೆ.ಎಲ್.ಭಟ್, ಆವರಗೆರೆ ಚಂದ್ರು, ವಾಸು ಆವರಗೆರೆ, ಐರಣಿ ಚಂದ್ರು, ಆನಂದರಾಜು, ಮಂಜುನಾಥ ಕೈದಾಳೆ, ಬಿಎಸ್‍ಎನ್‍ಎಲ್ ಷಣ್ಮುಖಪ್ಪ, ಶಿವಮೂರ್ತಿ, ತಿಪ್ಪೇಸ್ವಾಮಿ, ನಾಗರಾಜ ಆಚಾರ್, ಹನುಮಂತಪ್ಪ, ಕೆ.ಬಾನಪ್ಪ, ವಿ.ಲಕ್ಷ್ಮಣ್, ಪ್ರಸನ್ನಕುಮಾರ, ಶಾರದಮ್ಮ, ಸರೋಜಮ್ಮ ಮಲ್ಲಮ್ಮ ಸೇರಿದಂತೆ ಅಂಗನಾಡಿ ಕಾರ್ಯಕರ್ತೆಯರು, ಕಾರ್ಯಕರ್ತರು ಭಾಗವಹಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News