ಕಸದ ರಾಶಿಯ ಸಮೀಪ ಮಗುವಿಗೆ ಜನ್ಮ ನೀಡಿದ ಮಹಿಳೆ !

Update: 2019-01-10 07:57 GMT

ಗೊಂಡಾ, ಜ. 10: ವೈದ್ಯರು ಲಭ್ಯರಿಲ್ಲದ ಕಾರಣ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ನೆಲದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.

ಆರೋಗ್ಯ ಕೇಂದ್ರದಲ್ಲಿ ಕಸದ ರಾಶಿಯ ಸಮೀಪವೇ ಮಹಿಳೆ ಪ್ರಸವಿಸಿದ್ದು, ಆಕೆಗೆ ಸಹಾಯ ಮಾಡಲು ಅಲ್ಲಿದ್ದ ಕೆಲ ಮಹಿಳೆಯರು ನೆಲದಲ್ಲಿ ಒಂದು ಬಟ್ಟೆಯನ್ನು ಹರಡಿದ್ದರು.

ಈ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಿದ ನಂತರ ತಪ್ಪಿತಸ್ಥರೆಂದು ಕಂಡು ಬಂದ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ. ರತನ್ ಕುಮಾರ್ ಹೇಳಿದ್ದಾರೆ.

ಭಾರತದಲ್ಲಿ ಪ್ರತಿ 1,668 ಜನರಿಗೆ ಒಬ್ಬ ವೈದ್ಯರಿದ್ದು 2017ರ ಅಂಕಿ ಅಂಶದಂತೆ ದೇಶಾದ್ಯಂತ ಸುಮಾರು 8 ಲಕ್ಷ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News