ಶೇ.10 ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅಪೀಲು ದಾಖಲು

Update: 2019-01-10 14:56 GMT

ಹೊಸದಿಲ್ಲಿ,ಜ.10: ಮೇಲ್ಜಾತಿಗಳ ಬಡವರಿಗೆ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ಮೀಸಲಾತಿಯನ್ನು ಒದಗಿಸುವ ಮಸೂದೆಯನ್ನು ಪ್ರಶ್ನಿಸಿ ಗುರುವಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.

ಯೂಥ್ ಫಾರ್ ಇಕ್ವಾಲಿಟಿ ಸಂಘಟನೆ ಮತ್ತು ಕೌಶಲ ಕಾಂತ್ ಮಿಶ್ರಾ ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ ಆರ್ಥಿಕ ಮಾನದಂಡವು ಮೀಸಲಾತಿಗೆ ಏಕೈಕ ಆಧಾರವಲ್ಲದ್ದರಿಂದ ಮಸೂದೆಯನ್ನು ರದ್ದುಗೊಳಿಸುವಂತೆ ಕೋರಲಾಗಿದೆ.

ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮೀಸಲಾತಿಯನ್ನು ಸಾಮಾನ್ಯ ವರ್ಗಗಳಿಗೆ ಸೀಮಿತಗೊಳಿಸುವಂತಿಲ್ಲ ಮತ್ತು ಶೇ.50ರ ಮೀಸಲಾತಿಯನ್ನು ಉಲ್ಲಂಘಿಸುವಂತಿಲ್ಲವಾದ್ದರಿಂದ ಈ ಮಸೂದೆಯು ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ವಾದಿಸಿದ್ದಾರೆ.

ಸಂವಿಧಾನ(124ನೇ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಮಂಗಳವಾರ ಅಂಗೀಕರಿಸಿತ್ತು. ಬುಧವಾರ ರಾಜ್ಯಸಭೆಯೂ ಅಂಗೀಕರಿಸುವುದರೊಡನೆ ಮಸೂದೆಗೆ ಸಂಸತ್ತಿನ ಒಪ್ಪಿಗೆ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News