ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ

Update: 2019-01-11 08:51 GMT

ಹೊಸದಿಲ್ಲಿ, ಜ.11: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಗೆ ಹೋಲಿಸಿದ್ದಾರೆ.

“ಅವರು ಯಾರ ಮಾತನ್ನಾದರೂ ಕೇಳುತ್ತಾರೆಯೇ?, ಅವರು ತಮ್ಮ ಮಾತುಗಳನ್ನು ಮಾತ್ರ ಕೇಳುತ್ತಾರೆ. ಅವರು ಸಿಬಿಐ ನಿರ್ದೇಶಕರನ್ನು ರಾತ್ರೋರಾತ್ರಿ ಪದಚ್ಯುತಗೊಳಿಸಿದರು, ಅಮಾನ್ಯೀಕರಣ ಜಾರಿಗೊಳಿಸಿದರು. ಇದು ಸರ್ವಾಧಿಕಾರವಲ್ಲವೇನು?, ಅವರು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೇನು?, ಅವರು ವಿತ್ತ ಸಚಿವರು ಯಾ ರಿಸರ್ವ್ ಬ್ಯಾಂಕ್ ಗವರ್ನರ್ ಅವರನ್ನು  ಕೇಳಿದ್ದಾರೆಯೇ?, ಇಲ್ಲ. ಅವರಿಗೆ ಹಾಗೆ ಮಾಡಬೇಕೆನಿಸಿತು, ಮಾಡಿದರು. ಇದಕ್ಕೇ ಸರ್ವಾಧಿಕಾರ ಎಂದು ಹೇಳುವುದು'' ಎಂದು ಶಿಂಧೆ ಅವರು ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.

ಸೋಲಾಪುರ್ ನಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸುತ್ತಾ, “ಅವರು (ಪ್ರಧಾನಿ) ಹಿಟ್ಲರ್ ಅಲ್ಲದೆ ಮತ್ತಿನ್ನೇನು?, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತವೆ. ಆದರೆ ಇಲ್ಲಿ ಪೊಲೀಸರಿಗೆ ಸೂಚನೆ ನೀಡಿ ಮಾಡಲಾಗಿದೆ (ಸೋಲಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆ) ಅವರು ಪುಟಿನ್ ಅವರಂತೆ ಕಾರ್ಯಾಚರಿಸುತ್ತಿದ್ದಾರೆ,'' ಎಂದು ಶಿಂಧೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News