ಅನಾಥ ಮೃತದೇಹವನ್ನು ತ್ಯಾಜ್ಯದೊಂದಿಗೆ ಸುಟ್ಟ ಪೊಲೀಸರು !

Update: 2019-01-11 10:31 GMT

ಲಕ್ನೋ, ಜ.11: ವಾರಸುದಾರರಿಲ್ಲದ ಮೃತದೇಹದ ಅಂತ್ಯಕ್ರಿಯೆಗೆ ಇಲಾಖೆಯಿಂದ ಹಣ ದೊರೆತ ಹೊರತಾಗಿಯೂ ಆ ಹಣವನ್ನು ಕಿಸೆಗಿಳಿಸಿದ ಪೊಲೀಸರು ಮೃತದೇಹವನ್ನು ತ್ಯಾಜ್ಯದ ರಾಶಿಯೊಂದಿಗೆ ಸುಟ್ಟ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾಘ್‌ಪತ್ ಎಂಬಲ್ಲಿಂದ ವರದಿಯಾಗಿದೆ.

ವಾರಸುದಾರರಿಲ್ಲದ ಮೃತದೇಹಕ್ಕೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಇಲಾಖೆ ಪೊಲೀಸ್ ಸಿಬ್ಬಂದಿಗೆ ರೂ.2,700 ಮಂಜೂರು ಮಾಡಿತ್ತೆನ್ನಲಾಗಿದೆ. ಆದರೆ ಆ ಹಣವನ್ನು ಕಿಸೆಗಿಳಿಸಿದ ಪೊಲೀಸರು ನಂತರ ಮೃತದೇಹವನ್ನು ಪ್ಲಾಸ್ಟಿಕ್ ಮತ್ತು ಟಯರ್ ತ್ಯಾಜ್ಯಗಳೊಂದಿಗೆ ಸೀಮೆ ಎಣ್ಣೆ ಹಾಕಿ ಸುಟ್ಟಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹಿರಿಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ಧಾರೆ.

ಯಾವುದೇ ವಾರಸುದಾರರಿಲ್ಲದ ಕಳೇಬರವನ್ನೂ ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಬೇಕಿದೆ. ಆದರೆ ಇಲ್ಲಿ ಸಿಬ್ಬಂದಿ ನಡೆಸಿದ್ದು ಭ್ರಷ್ಟಾಚಾರ ಮಾತ್ರವಲ್ಲ ಅಮಾನವೀಯ ಕೂಡ ಎಂದು ಮಾಜಿ ಡಿಜಿಪಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News