ಸಹಾಯದ ನಿರೀಕ್ಷೆಯಲ್ಲಿದ್ದ ನಿರ್ಗತಿಕ ವೃದ್ದೆಯ ನೆರವಾದ ಮಹಿಳೆಯರು

Update: 2019-01-11 13:39 GMT

ಸಕಲೇಶಪುರ, ಜ. 7:  ಕಳೆದ 15 ಕ್ಕೂ ಹೆಚ್ಚು ವರ್ಷಗಳಿಂದ ಬೀದಿಯಲ್ಲಿ ವಾಸವಾಗಿದ್ದ ವೃದ್ದೆಯೋಬ್ಬಳು ಮಹಿಳಾ ಸಂಘದ ನೆರವಿನಿಂದ ವೃದ್ದಾಶ್ರಮಕ್ಕೆ ಸೇರ್ಪಡೆಯಾದರು.

ಇಲ್ಲಿಯ ಮಹಿಳಾ ಮಾರ್ಗದರ್ಶಿ ಅಸೋಸಿಯೇಟ್ ಅಧ್ಯಕ್ಷ ಕಲ್ಪನಾ ಕೀರ್ತಿ ಮತ್ತು ಸದಸ್ಯರು ನಿರ್ಗತಿಕ ವೃದ್ದೆಯನ್ನು ತುಮಕೂರಿನ ವೃದ್ದಾಶ್ರಮಕ್ಕೆ ಸೇರಿಸಿದರು.

ಪತ್ರಿಕೆಯೊಂದಿಗೆ ಮಾತಾನಾಡಿದ ಸಂಘದ ಅಧ್ಯಕ್ಷೆ ಮತ್ತು ವಕೀಲೆ ಕಲ್ಪನಾ ಕೀರ್ತಿ, ಈ ವೃದ್ದೆಯ ತಾಲೂಕು ಆಡಳಿತದ ಗಮನಕ್ಕೆ ತರಲಾಯಿತು ನಂತರ ವೈದ್ಯಕೀಯ ತಪಾಸಣೆ ನಡೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿ ತುಮಕೂರಿನ ವೃದ್ದಶ್ರಮಕ್ಕೆ ಕಳುಹಿಸಲಾಯಿತು. ಯಾರನ್ನೆ ಆಗಲಿ ಈ ರೀತಿಯಾಗಿ ಬೀದಿಯಲ್ಲಿ ಬಿಡುವುದು ಅಮಾನವೀಯ, ಪೋಷಿಶಿಸಲು ಸಾದ್ಯವಿಲ್ಲದಿದ್ದರೆ ಸಂಭಂದಿಸಿದ ಸಂಸ್ಥೆಗಳ ಮೂಲಕ ಬದುಕುವ ವ್ಯವಸ್ಥೆಮಾಡಬಹುದು ಎಂದರು.

ಈಕೆಯ ಹೆಸರು ಮಂಜಮ್ಮ  ಪತಿಯ ಹೆಸರು ಮಂಜೇಗೌಡ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ನೀಲಾ, ತೇಜಾವತಿ,ಶುಭ, ಮುಮ್ಮತಾಜ್, ಸೀಮ ಸೇರಿದಂತೆ ಅನೇಕರು ಇದ್ದರು ಎಂದರು

 ಸುಮಾರು 70 ವರ್ಷದ ಲಕ್ಷಮ್ಮ ಸುಮಾರು 15 ವರ್ಷಗಳಿಂದ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಸಿಕ್ಕದ್ದನ್ನು ತಿನ್ನುತ್ತಾ ಕಂಡಜಾಗದಲ್ಲಿ ಮಲಗುತ್ತಾ ಆಯಸ್ಸು ಕಳೆಯುತ್ತಿದ್ದಾರೆ. ಸದಾ 3 ಪ್ಲಾಸ್ಟಿಕ್ ಚೀಲಗಳನ್ನು ಕೈಯಲ್ಲಿ ಹಿಡಿದುಕೊಂಡು ಊರೆಲ್ಲ ತಿರುಗುವ ವೃದ್ದೆಯ ಹೆಸರು ಏನೆಂದು ಅವರಿಗೆ ತಿಳಿದಿಲ್ಲ. ಮಳೆ ಮತ್ತು ಗಾಳಿಯೇ ಇವರಿಗೆ ಸ್ನಾನ. ದೇಹಕ್ಕೆ ಜಳಕ ಮಾಡಿ ದಶಕಗಳೇ ಕಳೆದಿರಬಹುದು. ‘ತನ್ನವರು ಯಾರು ಇಲ್ಲ’ಎಂದು ಕೊರಗಿನಲ್ಲಿದ್ದ ವೃದ್ದೆಗೆ ಹಾದಿಯಲ್ಲಿ ಹಾದು ಹೋಗುವವರು ನೀಡಿದ ಬಿಕ್ಷೆಯೇ ಆಧಾರವಾಗಿದ್ದ ಜೀವನಕ್ಕೆ ತುಮಕೂರಿನ ಸಂಸ್ಥೆ ಆಸರೆಯಾಗಿದೆ.

ಹಲವು ದಶಕಗಳಿಂದ ಈ ವೃದ್ದೆ ಈ ಊರಿನಲ್ಲಿ ಬೀಡು ಬಿಟ್ಟಿರುವುದರಿಂದ ಇವರು ಇಲ್ಲಿಯವರೇ ಆಗಿರಬಹುದೆಂಬ ಅನುಮಾನವಿತ್ತ ಇವರ ಸಂಬಂಧಿಕರು ಕ್ಯಾನಹಳ್ಳಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತದೆ.

ಮನವಿ ಮಾಡಿದ್ದ ಮಹಿಳಾ ಸಂಘ: ಸಂಬಂಧಿಕರು ಯಾರಾದರೂ ಇದ್ದರೆ ತಿಳಿಸಿ ಇಲ್ಲದಿದ್ದರೆ ತಾಲ್ಲೂಕು ಆಡಳಿತದ ಮೂಲಕ ನಿರ್ಗತಿಕರ ಧೃಢೀಕರಣ ದಾಖಲೆ ಪಡೆದು ನಿರ್ಗತಿಕರ ಕೇಂದ್ರಕ್ಕೆರವಾನಿಸಲಾಗುವುದು ಎಂದು ಮಹಿಳಾ ಜಾಗೃತಿ ಅಸೋಸಿಯೇಶನ್‍ ಅಧ್ಯಕ್ಷೆ ಹಾಗೂ ವಕೀಲೆ ಕಲ್ಪನಾಕೀರ್ತಿ ನಬೀಮ ವಿಜಯ ಪತ್ರಿಕೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.

ಆಶಸರೆಗಾಗಿ ಕಾದಿರುವ ಮತ್ತೋಂದುಜೀವ

ಸಕಲೇಶಪುರ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಪಾರ್ಕಿಂಗ್‍ ಕಟ್ಟಡದಲ್ಲಿನ ಶೌಚಾಲಯದ ಪಕ್ಕದಲ್ಲಿ ಸುರೇಶ್ (48) ಆಸರೆಯ ಕೊರಗಿನಲ್ಲಿ ಬದುಕುತ್ತಿದ್ದಾರೆ.  ಇವರಿಗೆ ಪತ್ನಿ ಮಗ ಎಲ್ಲರೂ ಇದ್ದರೂ ಯಾವಕಾರಣಕ್ಕೋ ಏನೋ ಯಾರು ಆರೈಕೆ ಮಾಡುತ್ತಿಲ್ಲ.

ಇವರಿಗೆ ನಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದು, ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಒಂದು ಎರಡು ಎಲ್ಲವೂ ಸ್ಥಳದಲ್ಲಿ  ಮಾಡುವಂತಹ ಸ್ಥಿತಿಯಲ್ಲಿದ್ದಾರೆ. ಸ್ನಾನ ಮಾಡಿ ವರ್ಷಗಳೇ ಕಳೆದಿದೆ. ಸ್ಥಳಿಯ ವ್ಯಾಪಾರಿಗಳು ನೀಡುವ ಹಣ ಮತ್ತು ಆಹಾರದಿಂದ ಬದುಕುತ್ತಿದ್ದಾನೆ. ಹೃದೆಯವಂತರು ಇವರ ಆಸರೆಗೆ ಬಂದು ನೆರವಾದರೆ ಒಂದು ಜೀವ ಬದುಕುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News