ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-01-11 18:45 GMT

ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):

ಮಾರ್ಗರೆಟ್ ಮೆಕ್ನಮ್ಯರ ಎಜುಕೇಶನ್ ಗ್ರಾಂಟ್ 2018-19
ವಿವರ:
  ಅಭಿವೃದ್ಧಿ ಹೊಂದುತ್ತಿರುವ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ, ಪದವಿ ಮುಗಿಸಿರುವ, ತಮ್ಮ ದೇಶದಲ್ಲಿ ಅಥವಾ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ಮಹಿಳಾ ಅಭ್ಯರ್ಥಿಗಳು ಅರ್ಹರು. ಯುಎಸ್ ಕೆನಡಾ ಆ್ಯಂಡ್ ಟ್ರಿನಿಟಿ ವಾಶಿಂಗ್ಟನ್ ವಿವಿಯಲ್ಲಿ ಅಧ್ಯಯನ ನಡೆಸಲು ಈ ಅನುದಾನ ಲಭ್ಯವಿದೆ.
ಅರ್ಹತೆ:
 ಅಮೆರಿಕ ಅಥವಾ ಕೆನಡಾದಲ್ಲಿ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ನಡೆಸಲು ಪೂರ್ಣ ಶೈಕ್ಷಣಿಕ ವರ್ಷಕ್ಕೆ ನೋಂದಾಯಿಸಿಕೊಳ್ಳಲು ಇಚ್ಛಿಸುವ, ಅರ್ಜಿ ಸಲ್ಲಿಸುವಾಗ ಕನಿಷ್ಠ 25 ವರ್ಷ ವಯಸ್ಸಾಗಿರುವ ಭಾರತೀಯ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ನೆರವು:
  ಆಯ್ದ ಅಭ್ಯರ್ಥಿಗಳಿಗೆ 15 ಸಾವಿರ ಡಾಲರ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 15, 2019
ಅರ್ಜಿ: 
ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಜಾಲತಾಣ: http://www.b4s.in/bharati/MME1

******************
ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಟಾಪ್‌ಕ್ಲಾಸ್ ಎಜುಕೇಶನ್ ಸ್ಕೀಂ 2018-19
ವಿವರ:
ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಈ ಯೋಜನೆಗೆ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪೂರ್ಣಕಾಲಿಕ ಪದವಿ ಕೋರ್ಸ್‌ಗೆ ಸೇರಬಯಸುವ ಎಸ್ಸಿ ಸಮುದಾಯದ ವಿದ್ಯಾರ್ಥಿಗಳು ಅರ್ಹರು.
ಅರ್ಹತೆ:
ಕುಟುಂಬದ ಆದಾಯ ವಾರ್ಷಿಕ 6 ಲಕ್ಷ ರೂ.ಗಿಂತ ಹೆಚ್ಚು ಇರದ ಅಭ್ಯರ್ಥಿಗಳು ಅರ್ಹರು.
ನೆರವು:
ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ ಪೂರ್ಣ ಪಾವತಿ, ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣ ನಡೆಸುವವರಿಗೆ ವಾರ್ಷಿಕ 2 ಲಕ್ಷ ರೂ., ವಾಣಿಜ್ಯ ಪೈಲಟ್ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ವಾರ್ಷಿಕ 3.72 ಲಕ್ಷ ರೂ., ವಸತಿ ಭತ್ತೆ ತಿಂಗಳಿಗೆ 2,220 ರೂ., ಇತರ ವೆಚ್ಚವಾಗಿ ವಾರ್ಷಿಕ 3 ಸಾವಿರ ರೂ., ಕಂಪ್ಯೂಟರ್ ಹಾಗೂ ಇತರ ವೆಚ್ಚವಾಗಿ 45 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 15, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/TCE1

**************
ವಿದ್ಯಾರ್ಥಿವೇತನ
(ಸಂಶೋಧನೆ ಆಧಾರಿತ):

ರಾಮನ್ ರಿಸರ್ಚ್ ಫೆಲೋಶಿಪ್ 2018- 19
ವಿವರ:
 ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಸಮಿತಿ ಈ ಫೆಲೋಶಿಪ್ ನೀಡುತ್ತದೆ. ವಿದೇಶದ ಹೆಸರಾಂತ ಸಂಸ್ಥೆಗಳಲ್ಲಿ, ಆರ್‌ಆ್ಯಂಡ್‌ಡಿ(ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್) ಕೇಂದ್ರಗಳಲ್ಲಿ ಉದಯೋನ್ಮುಖ ಮತ್ತು ಹೆಚ್ಚಿನ ಆದ್ಯತೆಯ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಹತೆ:
ಸಿಎಸ್‌ಐಆರ್‌ನ ನಿಯಮಿತ ವಿಜ್ಞಾನಿಯಾಗಿರಬೇಕು ಮತ್ತು ಸಿಎಸ್‌ಐಆರ್‌ನಲ್ಲಿ ಕನಿಷ್ಠ 5 ವರ್ಷ ಸಂಶೋಧನೆ ನಡೆಸಿದ ಅನುಭವ ಹೊಂದಿರಬೇಕು. 45 ವರ್ಷದೊಳಗಿನ, ಉನ್ನತ ಆದ್ಯತೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಅರ್ಹರು.
ನೆರವು:
 ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತೀ ತಿಂಗಳು 2500 ಡಾಲರ್ ಮೊತ್ತದ ಫೆಲೋಶಿಪ್ ಹಾಗೂ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲು, ನಿಯೋಜನೆಗೊಂಡಿರುವ ದೇಶದಲ್ಲಿರುವ ಸಂಸ್ಥೆಗಳನ್ನು ಸಂದರ್ಶಿಸಲು ಪೂರಕ ಅನುದಾನವಾಗಿ 1 ಸಾವಿರ ಡಾಲರ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಜನವರಿ 18, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/RRF8
***********

ವಿದ್ಯಾರ್ಥಿವೇತನ
(ಆದಾಯ ಆಧಾರಿತ):

ಪರಿಶಿಷ್ಟ ಜಾತಿ, ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಎನ್‌ಜಿಸಿ ಸ್ಕಾಲರ್‌ಶಿಪ್ 2018-19
ವಿವರ:
ವೃತ್ತಿಪರ ಪದವಿ ಅಧ್ಯಯನ ನಡೆಸಲು ಆಸಕ್ತಿ ಇರುವ ಎಸ್ಸಿ,ಎಸ್ಟಿ ಸಮುದಾಯದ ಆರ್ಥಿಕವಾಗಿ ಅಶಕ್ತ ಅಭ್ಯರ್ಥಿಗಳು ಅರ್ಹರು.
ಅರ್ಹತೆ:
ಪ್ರಥಮ ವರ್ಷದ ಎಂಬಿಬಿಎಸ್ ಅಥವಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಜಿಯಾಲಜಿ, ಜಿಯೊಫಿಸಿಕ್ಸ್ ಅಥವಾ ಎಂಬಿಎ ವಿದ್ಯಾರ್ಥಿಗಳೂ ಅರ್ಹರು. ಅಭ್ಯರ್ಥಿಗಳ ಒಟ್ಟು ವಾರ್ಷಿಕ ಆದಾಯ 4.5 ಲಕ್ಷ ರೂ. ಮೀರಿರಬಾರದು.
ನೆರವು:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪದವಿ ಮುಗಿಯುವವರೆಗೆ ವಾರ್ಷಿಕ 48,000 ರೂ. ( ಪ್ರತೀ ವರ್ಷದ ವಾರ್ಷಿಕ ಪರೀಕ್ಷೆಯ ಸಾಧನೆಯನ್ನು ಮತ್ತು ವಿದ್ಯಾರ್ಥಿಯ ನಡತೆಯನ್ನು ಪರಿಗಣಿಸಿ) ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಜನವರಿ 21, 2019
ಅರ್ಜಿ: ಅರ್ಜಿಗಳನ್ನು ಸಂಸ್ಥೆ, ಕಾಲೇಜು ಅಥವಾ ವಿವಿಗಳಿಗೆ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/OST7

************

ವಿದ್ಯಾರ್ಥಿವೇತನ
(ರಾಷ್ಟ್ರೀಯ ಮಟ್ಟ):

ಭಾರತೀಯರ ಉನ್ನತ ಶಿಕ್ಷಣಕ್ಕಾಗಿ ಜೆಎನ್ ಟಾಟಾ ದತ್ತಿನಿಧಿ 2018-19
ವಿವರ:
ವಿದೇಶದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಸ್ನಾತಕೋತ್ತರ, ಡಾಕ್ಟೋರಲ್ ಅಥವಾ ಪೋಸ್ಟ್ ಡಾಕ್ಟೋರಲ್ ಕಾರ್ಯಕ್ರಮ ಪೂರೈಸಲು ಆಸಕ್ತಿಯಿರುವ ಪದವಿ ವಿದ್ಯಾರ್ಥಿಗಳು.
ಅರ್ಹತೆ:
ತಮ್ಮ ಅಂತಿಮ ಶೈಕ್ಷಣಿಕ ಪರೀಕ್ಷೆಯಲ್ಲಿ ಕನಿಷ್ಠ ಶೇ.60 ಅಂಕ ಗಳಿಸಿರುವವರು. 45 ವರ್ಷ ಮೀರಿರದ, ಉತ್ತಮ ಶೈಕ್ಷಣಿಕ ಸಾಧನೆ ಹೊಂದಿರುವ, ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿರುವ ವೃತ್ತಿಪರರೂ ಅರ್ಜಿ ಸಲ್ಲಿಸಬಹುದು.
ನೆರವು:
 ಒಂದೇಬಾರಿ 1 ಲಕ್ಷ ರೂ.ಯಿಂದ 10 ಲಕ್ಷ ರೂ.ವರೆಗಿನ ಮೊತ್ತ ನೀಡಲಾಗುವುದು. ಅಲ್ಲದೆ 7.50 ಲಕ್ಷ ರೂ. ಮೊತ್ತದ ಉಡುಗೊರೆ ಸ್ಕಾಲರ್‌ಶಿಪ್ ಹಾಗೂ ಸಂಬಂಧಿತ ಟ್ರಸ್ಟ್‌ಗಳಿಂದ 50 ಸಾವಿರ ರೂ. ವರೆಗಿನ ಪ್ರವಾಸ ಭತ್ತೆ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
2019ರ ಮಾರ್ಚ್ 11 ಮಧ್ಯಾಹ್ನ 12 ಗಂಟೆಯವರೆಗೆ.
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/JNT5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News