ಆಮ್ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್ ನಿಧನ

Update: 2019-01-12 04:44 GMT

ಹೊಸದಿಲ್ಲಿ, ಜ.12: ಆಮ್ ಆದ್ಮಿ ಪಕ್ಷದ ನಾಯಕಿ ಮತ್ತು ರಾಯಲ್  ಬ್ಯಾಂಕ್ ಆಫ್ ಸ್ಕಾಟ್ಲೆಂಡ್ (ಆರ್ ಬಿಎಸ್) ಇದರ ಮಾಜಿ ಸಿಇಒ ಮೀರಾ ಸನ್ಯಾಲ್ (57)  ಅವರು ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

ಕೇರಳದ ಕೊಚ್ಚಿ ಮೂಲದ ಸನ್ಯಾಲ್   ರಾಯಲ್  ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ನ ಸಿಇಒ ಹುದ್ದೆಯನ್ನು ತೊರೆದು 2014ರಲ್ಲಿ ಆಮ್ ಆದ್ಮಿ ಪಕ್ಷದಿಂದ  ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರಿಗೆ ಸೋಲಾಗಿತ್ತು.

ಎಬಿಎಸ್ ಮತ್ತು  ಎಬಿಎನ್  ಬ್ಯಾಂಕ್  ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸನ್ಯಾಲ್  ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News