‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಪ್ರದರ್ಶನ: ಚಿತ್ರಮಂದಿರದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ

Update: 2019-01-12 10:57 GMT

ಕೊಲ್ಕತ್ತಾ, ಜ.12: ಕೊಲ್ಕತ್ತಾದ ಖ್ವೆಸ್ ಮಾಲ್ ನಲ್ಲಿನ ಇನಾಕ್ಸ್ ಮಲ್ಟಿಪ್ಲೆಕ್ಸ್ ನಲ್ಲಿ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರ ಪ್ರದರ್ಶನ ಇನ್ನೇನು ಆರಂಭಗೊಳ್ಳಬೇಕೆನ್ನುವಷ್ಟರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚಿತ್ರಮಂದಿರದೊಳಕ್ಕೆ ನುಗ್ಗಿ ಪರದೆಯನ್ನು ಹರಿದು ಹಾಕಿರುವ ಬಗ್ಗೆ ವರದಿಯಾಗಿದೆ.

ಚಿತ್ರ ವೀಕ್ಷಿಸಲು ಆಗಮಿಸಿದ್ದ ಜನರನ್ನು ಕೂಡಲೇ ಅಲ್ಲಿಂದ ಹೊರ ಹೋಗುವಂತೆ ಪ್ರತಿಭಟನಾಕಾರರು ಆಗ್ರಹಿಸಿದರಲ್ಲದೆ ಚಿತ್ರವು ತಮ್ಮ ಪಕ್ಷದ ನಾಯಕರಿಗೆ ಅಗೌರವ ತೋರಿದೆ ಎಂದು ದೂರಿದ್ದಾರೆ. ಕಾಂಗ್ರೆಸ್ ನಾಯಕ ರಾಕೇಶ್ ಸಿಂಗ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಆದರೆ ಸ್ಥಳಕ್ಕಾಗಮಿಸಿದ ಪೊಲೀಸರು ಸ್ವಲ್ಪ ಹೊತ್ತಿನಲ್ಲಿಯೇ ಚಿತ್ರ ಯಾವುದೇ ಅಡ್ಡಿಯಿಲ್ಲದೆ ಪ್ರದರ್ಶನಗೊಳ್ಳುವಂತೆ ಕ್ರಮ ಕೈಗೊಂಡರು. ದಕ್ಷಿಣ ಕೊಲ್ಕತ್ತಾದ ಭ್ವಾನಿಪೋರ್ ಪ್ರದೇಶದಲ್ಲಿರುವ ಇಂದಿರಾ ಚಿತ್ರಮಂದಿರ ಹಾಗೂ ಸಿಲಿಗುರಿಯ ಚಿತ್ರಮಂದಿರದೆದುರು ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ.

ಪ್ರತಿಭಟನೆಗಳಿಂದ  ದೂರವುಳಿದಿರುವ  ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಇಂತಹ ಪ್ರತಿಭಟನೆಗಳನ್ನು ಬೆಂಬಲಿಸುವುದಿಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News