ಹಾಸನ: ಎರಡನೆ ದಿನವೂ ಮುಂದುವರೆದ ಒತ್ತುವರಿ ಕಟ್ಟಡ ತೆರವು ಕಾರ್ಯಾಚರಣೆ

Update: 2019-01-12 18:32 GMT

ಹಾಸನ,ಜ.12: ನಗರಸಭೆಯ ಶುಕ್ರವಾರ ಪ್ರಾರಂಭಿಸಿದ ನಗರದ ಬಿ.ಎಂ. ರಸ್ತೆಯಲ್ಲಿ ಒತ್ತುವರಿ ಮಾಡಿರುವ ಕಟ್ಟಡ ತೆರವು ಕಾರ್ಯಚರಣೆಯು ಎರಡನೇ ದಿನವೂ ಮುಂದುವರೆಯಿತು.

ಈಗಾಗಲೇ ನಗರದ ಬೃಹತ್ ಕಟ್ಟಡ ಬಿಗ್ ಬಝಾರ್ ಮುಂಬಾಗ ತೆರವು ಮಾಡುವ ಮೂಲಕ ಕಟ್ಟಡಗಳ ಅಕ್ರಮ ಭಾಗದ ತೆರವು ಕಾರ್ಯ ಆರಂಭಿಸಿತು. ಶನಿವಾರ ಬೆಳಗ್ಗಿನಿಂದಲೇ ನಗರಸಭೆಯು ಒಂದು ಹಿಟಾಚಿ, ಜೆಸಿಬಿ ಮೂಲಕ ತೆರವು ಕಾರ್ಯ ಶುರುಮಾಡಿತು. ಕೆಲ ಅಂಗಡಿ ಮಾಲಕರು ಮೊದಲೇ ಎಚ್ಚೆತ್ತುಕೊಂಡು ತಾವೇ ಸ್ವಯಂ ಪ್ರೇರಿತವಾಗಿ ಕಟ್ಟಡ ತೆರವು ಕಾರ್ಯಚರಣೆ ಮಾಡಿಕೊಳ್ಳುತ್ತಿದರು. ರಸ್ತೆ ಅಗಲಿಕರಣ ಮಾಡುವುದರ ಮೂಲಕ ಸುಗಮ ವಾಹನ ಸಂಚಾರಕ್ಕೆ ಮುಂದಾಗಿರುವ ನಗರಸಭೆ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರೆ, ಅಂಗಡಿ ಮಾಲಕರು ಹಿಡಿ ಶಾಪ ಹಾಕುತ್ತಿದ್ದರು.

ಮೊದಲೇ ಸರ್ವೆ ನಡೆಸಿ ರೆಡ್ ಮಾರ್ಕ್ ಗೆರೆಯನ್ನು ಹಾಕಿ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ಕೊಡಲಾಗಿದ್ದರೂ ಅಂಗಡಿ ಮಾಲಕರು ಯಾವುದಕ್ಕೂ ಲೆಕ್ಕಿಸದೇ ಸುಮ್ಮನಿದ್ದರು. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ನಗರಸಭೆ ಈ ಕಾರ್ಯಕ್ಕೆ ಮುಂದಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News