ಪ್ರಧಾನಿ ನರೇಂದ್ರ ಮೋದಿ ಒನ್‍ಮ್ಯಾನ್ ಶೋ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

Update: 2019-01-13 16:34 GMT

ಮೈಸೂರು,ಜ.13: ಪ್ರಧಾನಿ ನರೇಂದ್ರ ಮೋದಿ ಒನ್‍ಮ್ಯಾನ್ ಶೋ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಗುಡುಗಿದರು.

ನಗರದಲ್ಲಿರುವ ಸಾ.ರಾ.ಕನ್ವೆನ್ಷನ್ ಹಾಲ್‍ನಲ್ಲಿ ರವಿವಾರ ಮೈಸೂರು-ಚಾಮರಾಜನಗರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಲರ್ಕ್ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮೇಲಿನಂತೆ ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಒನ್‍ಮ್ಯಾನ್ ಶೋ. ಹಿಂದೆ ರಾಜರುಗಳು ಅಷ್ಟದಿಕ್ಪಾಲಕರನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದರು. ಅದೇ ರೀತಿ ತಮ್ಮ ಮಂತ್ರಿ ಮಂಡಲವನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದಾರೆ. ಇಡೀ ಮಂತ್ರಿ ಮಂಡಲವೇ ಮೋದಿಯಾಗಿದೆ. ಪ್ರಧಾನಿ ಜಾತ್ಯಾತೀತ ವ್ಯವಸ್ಥೆಯ ವಿರುದ್ಧವಾಗಿದ್ದಾರೆ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News