ಮೋದಿಗೆ ಕ್ಲೀನ್ ಚಿಟ್ ವಿರುದ್ಧ ಝಕಿಯಾ ಜಾಫ್ರಿ ಅಪೀಲಿನ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Update: 2019-01-15 09:30 GMT

ಹೊಸದಿಲ್ಲಿ, ಜ.15: ಗುಜರಾತ್ ನಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿಗೆ ವಿಶೇಷ ತನಿಖಾ ತಂಡ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು  ದಾಖಲಿಸಿದ್ದ ಅಪೀಲಿನ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ.

ತನಿಖಾ ತಂಡದ ತೀರ್ಮಾನವನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟಿಗೆ ಈ ಹಿಂದೆ ಅವರು ಅಪೀಲು ಸಲ್ಲಿಸಿದ್ದರೂ ತನ್ನ ಅಕ್ಟೋಬರ್ 5, 2017ರ ತೀರ್ಪಿನಲ್ಲಿ ಹೈಕೋರ್ಟ್ ಈ ಅಪೀಲನ್ನು ತಿರಸ್ಕರಿಸಿತ್ತು.

ಇಂದು ಜಸ್ಟಿಸ್  ಎ.ಎಂ. ಖಾನ್ವಿಲ್ಕರ್ ಹಾಗೂ  ಜಸ್ಟಿಸ್ ಅಜಯ್ ರಸ್ತೋಗಿ ಅವರಿದ್ದ ಪೀಠದ ಮುಂದೆ ಪ್ರಕರಣ ಬಂದಾಗ ಅರ್ಜಿದಾರರ ಪರ ವಕೀಲರು ತಾವು ವಿಚಾರಣೆಯನ್ನು ಮುಂದೂಡಲು ಕೋರಿದ್ದನ್ನು ಪರಿಗಣಿಸಿ  ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರಗಳ ನಂತರ ನಿಗದಿ ಪಡಿಸಿತು.

ಫೆಬ್ರವರಿ 28, 2002ರಲ್ಲಿ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ್ದ 68 ಮಂದಿಯಲ್ಲಿ ಜಾಫ್ರಿ ಕೂಡ ಒಬ್ಬರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News