ಆಯ್ಕೆಗಾರರಿಲ್ಲದ ಪ್ರಶಸ್ತಿ ಪಡೆದ ಪ್ರಧಾನಿಗೆ ಶುಭಾಶಯಗಳು: ಮೋದಿಯನ್ನು ಕುಟುಕಿದ ರಾಹುಲ್

Update: 2019-01-15 17:58 GMT

ಹೊಸದಿಲ್ಲಿ,ಜ.15: ಪ್ರಪ್ರಥಮ ಫಿಲಿಪ್ ಕೊಟ್ಲರ್ ರಾಷ್ಟ್ರಪತಿ ಪ್ರಶಸ್ತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯ ಸೂಚಿಸುತ್ತಲೇ ಕುಟುಕಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯಾವುದೇ ಆಯ್ಕೆಗಾರರಿಲ್ಲದ ಮತ್ತು ಇದಕ್ಕೂ ಮೊದಲು ಎಂದೂ ನೀಡಲಾಗದ ಜಗತ್ಪ್ರಸಿದ್ಧ ಪ್ರಶಸ್ತಿಯನ್ನು ಪಡೆದಿರುವ ಪ್ರಧಾನಿ ಮೋದಿಯವರಿಗೆ ಶುಭಾಶಯ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗಾಂಧಿ, ಈ ಪ್ರಶಸ್ತಿ ಎಷ್ಟೊಂದು ಪ್ರಸಿದ್ಧ ಎಂದರೆ ಅದಕ್ಕೆ ಯಾರು ಆಯ್ಕೆಗಾರರೇ ಇಲ್ಲ ಮತ್ತು ಅದನ್ನು ಅಷ್ಟೇನೂ ಜನಪ್ರಿಯವಲ್ಲದ ಆಲಿಗಡ್‌ನ ಕಂಪೆನಿಯೊಂದು ಇದೇ ಮೊದಲ ಬಾರಿ ನೀಡುತ್ತಿದೆ. ಈ ಕಾರ್ಯಕ್ರಮವನ್ನು ಪತಂಜಲಿ ಮತ್ತು ರಿಪಬ್ಲಿಕ್ ಟಿವಿ ಆಯೋಜಿಸಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News