ಅಲಿ ಖಮರ್ ಭಾರತದ ಮಹಿಳಾ ಬಾಕ್ಸಿಂಗ್ ಕೋಚ್

Update: 2019-01-15 18:54 GMT

ಹೊಸದಿಲ್ಲಿ, ಜ.15: ಭಾರತದ ಪರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪ್ರಥಮ ಬಂಗಾರದ ಪದಕ ಗೆದ್ದುಕೊಟ್ಟ ಖ್ಯಾತಿಯ ಮುಹಮ್ಮದ್ ಅಲಿ ಖಮರ್ ಭಾರತದ ಮಹಿಳಾ ಬಾಕ್ಸಿಂಗ್‌ನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಹುದ್ದೆೆ ಪಡೆದ ಅತಿ ಕಿರಿಯ ವಯಸ್ಸಿನ ವ್ಯಕ್ತಿಯಾಗಿದ್ದಾರೆ ಖಮರ್.

ಇನ್ನೆರಡು ತಿಂಗಳುಗಳಲ್ಲಿ 38ನೇ ವಯಸ್ಸಿನ ಕಾಲಿಡುವ ಅರ್ಜುನ ಪ್ರಶಸ್ತಿ ವಿಜೇತ ಅಲಿಯವರನ್ನು ಸೋಮವಾರ ರಾತ್ರಿ ಶಿವ ಸಿಂಗ್ ಅವರ ಸ್ಥಾನಕ್ಕೆ ನೇಮಿಸಲಾಗಿದೆ. ವರ್ಷಕ್ಕಿಂತ ಹೆಚ್ಚು ದಿನ ಅವರು ರಾಷ್ಟ್ರೀಯ ಶಿಬಿರದಲ್ಲಿ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕೋಲ್ಕತಾ ಮೂಲದ ಅಲಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ರೈಲ್ವೆ ಕ್ರೀಡಾ ಅಭಿವೃದ್ಧಿ ಮಂಡಳಿಯ ಮಹಿಳಾ ತಂಡದ ಕೋಚ್ ಹುದ್ದೆಯಲ್ಲಿದ್ದರು.

‘‘ ಕೋಚ್ ಹುದ್ದೆಯ ನೇಮಕ ವಿಷಯ ನನಗೆ ಆಶ್ಚರ್ಯ ತರಿಸಿದ್ದು, ಇಂತಹ ಮಹತ್ವದ ಹುದ್ದೆಗೆ ನನನ್ನು ಪರಿಗಣಿಸಿದ ಭಾರತದ ಬಾಕ್ಸಿಂಗ್ ಒಕ್ಕೂಟಕ್ಕೆ ಆಭಾರಿಯಾಗಿದ್ದೇನೆ’’ ಎಂದು 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲಘು ಫ್ಲೈವೇಟ್ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟಿರುವ ಅಲಿ ಖಮರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News