ಬಿಜೆಪಿಯ ನಾಟಕ ನಿನ್ನೆಯೇ ಬಂದ್ ಆಗಿದೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Update: 2019-01-16 11:39 GMT

ಬೆಂಗಳೂರು,ಜ.16: ಆಯವ್ಯಯದ ಬಗ್ಗೆ ಚರ್ಚಿಸುವ ಉದ್ದೇಶಕ್ಕಾಗಿ ಮಾತ್ರ ಜನವರಿ 18ರಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್‌‌ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. 

ತಾಜ್‌ ವೆಸ್ಟೆಂಡ್ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಆಯವ್ಯಯದ ಜೊತೆಗೆ ರಾಜಕೀಯವೂ ಚರ್ಚೆ ಆಗಬಹುದು ಎಂದರು.

ಬಿಜೆಪಿ ಅವರ ಆಪರೇಷನ್‌ ಕಮಲದ ನಾಟಕ ನಿನ್ನೆಗೆ ಬಂದ್ ಆಗಿದೆ. ಕಾಂಗ್ರೆಸ್‌ನ ಎಲ್ಲ ಶಾಸಕರು ನಮ್ಮೊಂದಿಗಿದ್ದಾರೆ. ಪಕ್ಷದಲ್ಲಿ ಎಲ್ಲವೂ ಸರಿ ಇದೆ. ಕೆಲವರು ಬೇರೆಡೆ ತೆರಳಿರಬಹುದು‌. ಆದರೆ ಅವರು ಸಹ ವಾಪಸ್ ಬರಲಿದ್ದಾರೆ. ಮಾಧ್ಯಮದಲ್ಲಿ‌ ತೋರಿಸಿದ ಶಾಸಕರು ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲಿಯೇ ಇದ್ದಾರೆ. ಸಂಕ್ರಾತಿ ಹಬ್ಬಕ್ಕೆ ಸಿಹಿ ಸುದ್ದಿ ನೀಡುವುದಾಗಿ ಹೇಳಿರುವುದು ಯಡಿಯೂರಪ್ಪ. ಸಿಹಿ ಸುದ್ದಿ ಏನೆಂದು ಅವರನ್ನೇ ಕೇಳಿ ಎಂದು ಉತ್ತರಿಸಿದರು.‌

ಸಚಿವ ಸ್ಥಾನ ಸಿಗದಿದ್ದಾಗ ಬೇಸರವಾಗುವುದು ಸಹಜ. ಇದನ್ನೇ ಲಾಭ ಮಾಡಿಕೊಳ್ಳಲು ಬಿಜೆಪಿಯವರು ಪ್ರಯತ್ನ ಪಡುತ್ತಿದ್ದಾರೆ. ಇದು ಸಕ್ಸಸ್ ಆಗುವುದಿಲ್ಲ. ನಮ್ಮ‌ ಸರಕಾರ ಸುಭದ್ರವಾಗಿದೆ. ಸರಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನ ಫಲ ನೀಡದು. ಬಿಜೆಪಿ ಅವರು ನಾಟಕ ನಿನ್ನೆಗೆ ಬಂದ್ ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News