ಐಸಿಸ್ ಜೊತೆ ಸಂಪರ್ಕ ಶಂಕೆ: ಓರ್ವ ಎನ್‌ಐಎ ವಶಕ್ಕೆ

Update: 2019-01-17 13:02 GMT
ಸಾಂದರ್ಭಿಕ ಚಿತ್ರ

ಲುಧಿಯಾನ, ಜ.17: ಐಸಿಸ್ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆಯಲ್ಲಿ ಪಂಜಾಬ್‌ನ ಲುಧಿಯಾನದ ಮದ್ರಸ ಶಿಕ್ಷಕನನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‌ಐಎ) ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಮುಹಮ್ಮದ್ ಉವೈಸ್ ಎಂಬಾತ ಒಂದು ತಿಂಗಳ ಹಿಂದೆ ಉತ್ತರಪ್ರದೇಶದಿಂದ ಪಂಜಾಬ್‌ಗೆ ಆಗಮಿಸಿ ಲುಧಿಯಾನದ ಮದನಿ ಮಸೀದಿಯಲ್ಲಿ ಮೌಲ್ವಿ ಹಾಗೂ ಮದ್ರಸ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಿಗ್ಗಿನ ಜಾವ ಮದ್ರಸಕ್ಕೆ ದಾಳಿ ನಡೆಸಿದ ಎನ್‌ಐಎ ತಂಡ ಅವರನ್ನು ವಶಕ್ಕೆ ಪಡೆದು ಕರೆದೊಯ್ದಿದೆ ಎಂದು ಟಿಬ್ಬ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಉವೈಸ್ ಮದ್ರಸದ ಖಾಯಂ ಶಿಕ್ಷಕನಲ್ಲ. ಆತನ ಕುಟುಂಬದವರು ಇಲ್ಲಿಲ್ಲ. ಮೌಲ್ವಿಯಾಗಿ ಹಾಗೂ ಮದ್ರಸ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಂದು ಮಸೀದಿಯ ಆಡಳಿತವರ್ಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News